ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ.8: ನಿರ್ಭಯಾಳ ತಾಯಿ ಸಲ್ಲಿಸಿದ ಅರ್ಜಿ ವಿಚಾರಣೆಯ ವೇಳೆ ದಿಲ್ಲಿ ಕೋರ್ಟಿನಲ್ಲಿ ನಾಟಕೀಯ ಸನ್ನಿವೇಶಗಳು ಸೃಷ್ಟಿಯಾದವು. ಆರೋಪಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್ ನ ತಾಯಿ ನಿರ್ಭಯಾಳ ತಾಯಿಯ ಬಳಿಗೆ ಬಂದು ತನ್ನ ಮಗನನ್ನು ಕ್ಷಮಿಸಬೇಕೆಂದು ಬೇಡಿಕೊಂಡರು. ನಿರ್ಭಯಾ ತಾಯಿಯ ಸೆರಗು ಹಿಡಿದು ಅವರು ಯಾಚಿಸಿದರು.
ಆದರೆ, ತನಗೆ ಒಬ್ಬಳೇ ಮಗಳಿದ್ದುದು ಅವಳಿಗೆ ಏನು ಸಂಭವಿಸಿತ್ತೆಂದು ನಿಮಗೆ ಗೊತ್ತಿಲ್ಲವೇ ಎಂದು ಮುಖೇಶ್ ಸಿಂಗ್ ನ ತಾಯಿಯೊಂದಿಗೆ ನಿರ್ಭಯಾಳ ತಾಯಿ ಕೇಳಿದರು. ಅವೆಲ್ಲವನ್ನು ನಾನು ಹೇಗೆ ಮರೆಯಲು ಸಾಧ್ಯ ಎಂದು ನಿರ್ಭಯಾಳ ತಾಯಿ ಪ್ರಶ್ನಿಸಿದರು. ಈ ನಡುವೆ ಇಬ್ಬರನ್ನು ಮೌನವಾಗಿರಲು ಕೋರ್ಟು ವಿಚಾರಣೆ ಮಾಡುತ್ತಿದ್ದ ಜಡ್ಜ್ ಹೇಳಿದರು. ಅಲ್ಲಿಗೆ ಅವರಿಬ್ಬರ ಸಂಭಾಷಣೆ ಕೊನೆಗೊಂಡಿತು.
ಪುತ್ರಿ ಕೊಲೆಯಾದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಲ್ಕು ಮಂದಿಗೆ ಗಲ್ಲು ವಿಧಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆಂದು ಆರೋಪಿಗಳ ವಿರುದ್ಧ ಮರಣ ವಾರಂಟ್ ಹೊರಡಿಸಬೇಕೆಂದು ಆಗ್ರಹಿಸಿ ನಿರ್ಭಯಾ ತಾಯಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.












