ಸನ್ಮಾರ್ಗ ವಾರ್ತೆ-
ಪಟ್ನಾ, ಜ.13: ಬಿಹಾರದಲ್ಲಿ ಎನ್ಆರ್ ಸಿ ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಭರವಸೆ ನೀಡಿದ್ದಾರೆ. ರಾಜ್ಯದ ವಿಧಾನಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದು ಕೇಂದ್ರದ ಬಿಜೆಪಿ ಸರಕಾರಕ್ಕೆ ಅದರ ಮಿತ್ರ ಪಕ್ಷ ಜೆಡಿಯು ನಿಲುವು ದೊಡ್ಡ ಆಘಾತವಾಗಿದೆ. ಎಲ್ಲ ಪಾರ್ಟಿಗಳು ಒಪ್ಪುವುದಾದರೆ ಸಿಎಎಯ ಕುರಿತು ಚರ್ಚಿಸೋಣ. ಪಾರ್ಲಿಮೆಂಟಿನಲ್ಲಿ ಇನ್ನೂ ಕಾನೂನು ಕುರಿತು ಚರ್ಚೆ ನಡೆಸಬಹುದಾಗಿದೆ ಎಂದು ನಿತೀಶ್ ಕುಮಾರ್ ಹೇಳಿದರು.
ಎನ್ಆರ್ ಸಿ ವಿರುದ್ಧ ಬಹಿರಂಗ ನಿಲುವು ಕೈಗೊಂಡ ಮೊದಲ ಬಿಜೆಪಿಯ ಮಿತ್ರಪಕ್ಷದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗಿದ್ದಾರೆ. ಬಿಜೆಪಿ ಮೈತ್ರಿಯಲ್ಲಿ ಬಿಹಾರ ಸರಕಾರ ಇದೆ. ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಎನ್ಆರ್ ಸಿ, ಸಿಎಎಯ ವಿರುದ್ಧ ಮೊದಲೇ ನಿಲುವು ಕೈಗೊಂಡಿದ್ದರು.












