ಪಾಕ್ ಆಕ್ರಮಿತ ಕಾಶ್ಮೀರ ಮರು ವಶಪಡಿಸಿಕೊಳ್ಳಲು ಅದೇಶಿಸಿ- ಕೇಂದ್ರ ಸರಕಾರಕ್ಕೆ ಶಿವಸೇನೆ ಆಗ್ರಹ

0
665

ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 13: ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರುವಶಪಡಿಸಿಕೊಳ್ಳುವುದಕ್ಕೆ ಕೇಂದ್ರ ಸರಕಾರ ಈ ಬಾರಿ ಆದೇಶ ಹೊರಡಿಸಬೇಕೆಂದು ಶಿವಸೇನೆ ಆಗ್ರಹಿಸಿದೆ. ಟುಕ್ಡ, ಟುಕ್ಡ ತಂಡಗಳ ಕುರಿತು ಹೇಳಿಕೆ ನೀಡುವುದನ್ನು ಬಿಟ್ಟು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರು ವಶಪಡಿಸಿಕೊಳ್ಳಲು ಭೂಸೇನೆಯ ಮುಖ್ಯಸ್ಥರನ್ನು ಕಳುಹಿಸಬೇಕೆಂದು ಶಿವಸೇನೆ ಆಗ್ರಹಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಟುಕ್ಡ ತಂಡಗಳನ್ನು ನಿಗ್ರಹಿಸಲು ಭಾರತದ ಭೂಪಟ ನೀಡಿ ಭೂಸೇನೆಯ ಮುಖ್ಯಸ್ಥನನ್ನು ಕಳುಹಿಸಿ ಎಂದು ಶಿವಸೇನೆಯ ಮುಖವಾಣಿ ಸಾಮ್ನಾನದ ಸಂಪಾದಕೀಯದಲ್ಲಿ ಆಗ್ರಹಿಸಲಾಗಿದೆ.

ಹೆಚ್ಚಿನ ಉಗ್ರವಾದಿ ತರಬೇತಿ ಕೇಂದ್ರಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ. ಪಾಕಿಸ್ತಾನದ ಐಎಸ್‍ಐಯ ಬೆಂಬಲದಲ್ಲಿ ಅವು ಕಾರ್ಯಾಚರಿಸುತ್ತಿವೆ. ಮಿಂಚಿನ ಆಕ್ರಮಣದ ನಡೆಸಿಯೂ ಪಾಕಿಸ್ತಾನದ ತನ್ನ ಅಭ್ಯಾಸವನ್ನು ಕೈಬಿಟ್ಟಿಲ್ಲ. ಕಾಶ್ಮೀರದ ಜವಾನ್‍ರ ವೀರಮೃತ್ಯು, ಕಾಶ್ಮೀರದ ಸಮಸ್ಯೆಗಳು ಚುನಾವಣೆಯ ಲಾಭಕ್ಕಾಗಿ ಕೇಂದ್ರ ಸರಕಾರ ಉಪಯೋಗಿಸಿದೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.

ಕೇಂದ್ರ ಸರಕಾರ ಆದೇಶ ನೀಡುವುದಾದರೆ ಪಾಕಿಸ್ತಾನದ ಆಕ್ರಮಿತ ಕಾಶ್ಮೀರವನ್ನು ಮರುವಶಪಡಿಸಿಕೊಳ್ಳಲಾಗುವುದು ಎಂದು ಭೂಸೇನೆಯ ಮುಖ್ಯಸ್ಥ ಹೇಳಿದ್ದಾರೆ. ಅವರ ಹೊಸ ನೀತಿಗೆ ಸ್ವಾಗತವಿದೆ. 1994ರಲ್ಲಿ ಭಾರತ ಪಾರ್ಲಿಮೆಂಟು ಪ್ರಸ್ತಾವ ಪಾಸು ಮಾಡಿದ್ದು ಜಮ್ಮುಕಾಶ್ಮೀರ ಭಾರತದ ಅವಿಭಾಜ್ಯ ಘಟಕ ಎಂದು ಹೇಳಲಾಗಿದೆ. ಪಾಕ್ ಅಧೀನ ಕಾಶ್ಮೀರವನ್ನು ಮರುವಶಪಡಿಸಿಕೊಳ್ಳಲು ಮೋದಿ-ಶಾ ಸರಕಾರ ಆದೇಶ ಹೊರಡಿಸಬೇಕು. ಅದು ಭಾರತಕ್ಕೆ ಸಾವರ್‍ಕರ್ ರ ಅಖಂಡ ಭಾರತ ಎಂಬ ಕನಸು ನಿಜವಾಗಬೇಕಿದ್ದರೆ ಇದು ಅಗತ್ಯವಾಗಿದೆ ಎಂದು ಸಾಮ್ನಾ ಹೇಳಿದೆ.