ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ.13: ಕ್ಯಾಂಪಸ್ಗೆ ದಿಲ್ಲಿ ಪೊಲೀಸರು ಅನುಮತಿ ಪಡೆಯದೆ ನುಗ್ಗಿದ್ದಾರೆ ಎಂದು ಜಾಮಿಆ ಮಿಲಿಯ ಉಪಕುಲಪತಿ ನಜ್ಮಾ ಅಕ್ತರ್ ಹೇಳಿದರು. ಪೊಲೀಸರ ವಿರುದ್ಧ ಕ್ರಮ ಜರಗಿಸಲಾಗುವುದು. ವಿದ್ಯಾರ್ಥಿಗಳೊಂದಿಗೆ ನಡೆದ ಚರ್ಚೆಯಲ್ಲಿ ವಿಸಿ ಈ ಭರವಸೆ ನೀಡಿದರು. ಹಾಸ್ಟೆಲ್ಗಳಿಂದ ಹೊರಟು ಹೋಗಲು ವಿದ್ಯಾರ್ಥಿಗಳಿಗೆ ತಾನು ಸೂಚಿಸಿಲ್ಲ ಎಂದೂ ಅವರು ಹೇಳಿದರು.
ಡಿಸೆಂಬರ್ 15ರ ಹಿಂಸಾಚಾರದ ಬಳಿಕ ಕ್ಯಾಂಪಸ್ನ ಸುರಕ್ಷೆ ಹೆಚ್ಚಿಸಲಾಗಿದೆ. ಅಕ್ರಮ ಘಟನೆಗಳಿಗೆ ಸಂಬಂಧಿಸಿದ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ನಜ್ಮಾ ಅಕ್ತರ್ ತಿಳಿಸಿದರು. ಜಾಮಿಆ ಉಪಕುಲಪತಿ ವಿರುದ್ಧ ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ದಿಲ್ಲಿ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ವಿಶ್ವವಿದ್ಯಾನಿಲಯದ ಸುರಕ್ಷೆ ಹೆಚ್ಚಿಸಲು ಕೂಡ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.












