ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 14: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಕೇರಳ ಸರಕಾರ ಸುಪ್ರೀಂಕೋರ್ಟಿನ ಮೊರೆಹೋಗಿದೆ. ಇದಕ್ಕೆ ಸಂಬಂಧಿಸಿ ಸರಕಾರ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತು.
ಈ ಕಾನೂನು ಸಂವಿಧಾನ ವಿರೋಧಿಯಾಗಿದೆ ಎಂದು ಘೋಷಿಸಬೇಕೆಂದು ಸರಕಾರ ಆಗ್ರಹಿಸಿದೆ. ಸಂವಿಧಾನದ ಪರಿಚ್ಛೇದ 131 ಪ್ರಕಾರ ಅರ್ಜಿಯನ್ನು ರಾಜ್ಯ ಸರಕಾರ ಸಲ್ಲಿಸಿದೆ. ಸಿ ಎ ಎ ಕಾನೂನು ತಾರತಮ್ಯದಿಂದ ಕೂಡಿದೆ. ಸಂವಿಧಾನದ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಬೊಟ್ಟು ಮಾಡಲಾಗಿದೆ. ಕಾನೂನು ವಿರುದ್ಧ ಒಂದು ರಾಜ್ಯ ಪ್ರಪ್ರಥಮವಾಗಿ ಸುಪ್ರೀಂಕೋರ್ಟಿನ ಮೊರೆಹೋಗಿದೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಕೇರಳ ವಿಧಾನಸಭೆಯಲ್ಲಿ ಪ್ರಸ್ತಾವ ಪಾಸು ಮಾಡಲಾಗಿತ್ತು. ಇದರ ನಂತರ ಈಗ ಸರಕಾರ ಕೋರ್ಟಿಗೂ ಅರ್ಜಿ ಸಲ್ಲಿಸಿದೆ.












