ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 14: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲ ಪ್ರತಿಕ್ರಿಯಿಸಿದ್ದು ಭಾರತದಲ್ಲಿ ನಡೆಯುತ್ತಿರುವುದು ತನಗೆ ದುಃಖ ತರಿಸಿದೆ ಎಂದರು. ಕೆಟ್ಟ ವಿಷಯಗಳು ದೇಶದಲ್ಲಿ ನಡೆಯುತ್ತಿದೆ. ಬಾಂಗ್ಲದೇಶದಿಂದ ವಲಸೆ ಬಂದು ಭಾರತದಲ್ಲಿ ಇನ್‍ಫೋಸಿಸ್‍ನಲ್ಲಿ ಸಿಇಒ ಆಗುವುದು ನನ್ನ ಕನಸು ಎಂದು ನಡೆಲ್ಲ ಹೇಳಿದರು. ಬಸ್‍ಫೀಡ್ ಎಡಿಟರ್ ಬೆನ್ ಸ್ಮಿತ್‍ರೊಂದಿಗೆ ತನ್ನ ಪ್ರತಿಕ್ರಿಯೆಯನ್ನು ನಡೆಲ್ಲ ಹಂಚಿಕೊಂಡರು.
ನಡೆಲ್ಲ ಹೇಳಿಕೆಯ ಬೆನ್ನಿಗೇ ಅಧಿಕೃತ ಟ್ವಿಟರ್ ಪುಟದಲ್ಲಿ ಮೈಕ್ರೋಸಾಫ್ಟ್ ಕೂಡ ಪ್ರತಿಕ್ರಿಯಿಸಿತು. ಎಲ್ಲ ದೇಶಗಳಿಗೂ ಗಡಿಗಳನ್ನು ನಿರ್ಣಯಿಸುವ ಸಂರಕ್ಷಿಸುವ ಹಕ್ಕಿದೆ. ಪ್ರಜಾಪ್ರಭುತ್ವ ದೇಶಗಳಲ್ಲಿ ಜನರು, ಸರಕಾರ ಚರ್ಚಿಸಿ ಗಡಿಯನ್ನು ನಿರ್ಣಯಿಸಬೇಕಾಗಿದೆ. ಭಾರತದ ಅರ್ಥವ್ಯವಸ್ಥೆಗೆ ಪ್ರಯೋಜನವಾಗುವ ರೀತಿಯಲ್ಲಿ ವಲಸೆಗಾರರಿಗೆ ಭಾರದಲ್ಲಿ ಒಂದು ಸ್ಟಾರ್ಟ್ ಅಪ್ ತೆರೆಯಲು, ಮಲ್ಟಿನ್ಯಾಶನಲ್ ಕಂಪೆನಿಗಳ ಸಿಇಒ ಆಗಲು ಸಾಧ್ಯವಾಗಬೇಕೆಂಬುದು ತನ್ನ ನಿರೀಕ್ಷೆ ಎಂದು ನಡೆಲ್ಲ ಹೇಳಿದರು.












