ಸನ್ಮಾರ್ಗ ವಾರ್ತೆ-
ಇಂದೋರ್, ಜ. 14: ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರು ಜೆಎನ್ಯುಗೆ ಭೇಟಿ ನೀಡಿದ್ದರ ವಿರುದ್ಧ ಬಾಬಾ ರಾಮ್ ದೇವ್ ಪ್ರತಿಕ್ರಿಯಿಸಿದ್ದು ದೇಶದ ಸಾಮಾಜಿಕ-ರಾಜಕೀಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ದೀಪಿಕಾ ದೊಡ್ಡ ತೀರ್ಮಾನಗಳನ್ನು ಕೈಗೊಳ್ಳಬೇಕಾಗಿದೆ ಎಂದಿದ್ದಾರೆ. ತನ್ನಂತಹ ಜನರು ಸಲಹೆಗಾರರಾಗಿ ದೀಪಿಕಾರಿಗೆ ಅಗತ್ಯವಿದ್ದಾರೆ ಎಂದು ರಾಮ್ ದೇವ್ ಹೇಳಿದರು.
ಸಿಎಎಯು ಪೌರತ್ವ ತೆಗೆಯುವುದಕ್ಕಿರುವುದಲ್ಲ. ಹಾಗೆಂದು ಮೋದಿ, ಅಮಿತ್ ಶಾ ಹಲವು ಬಾರಿ ಹೇಳಿದ್ದಾರೆ. ಆದರೆ ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ಪ್ರತಿಭಟನೆಗಳು ಜಗತ್ತಿನ ಮುಂದೆ ದೇಶದ ಮುಖವನ್ನು ವಿಕೃತಗೊಳಿಸುತ್ತವೆ ಎಂದು ಅವರು ಹೇಳಿದರು. ಭಾರತದಲ್ಲಿ ಎರಡು ಕೋಟಿ ಅನಧಿಕೃತ ವಲಸೆಗಾರರು ಇದ್ದಾರೆ. ಅನಧಿಕೃತ ವಲಸೆಗಾರರ ಕಸದ ಬುಟ್ಟಿಯಾಗಲು ದೇಶ ಬಯಸುವುದಿಲ್ಲ. ಎನ್ ಆರ್ ಸಿ ವಿರೋಧಿಸುವ ಬದಲು ಸಲಹೆ ಸೂಚನೆ ನೀಡಬೇಕು. ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ಸೇರಿಸಬೇಕೆಂದು ಅವರು ಆಗ್ರಹಿಸಿದರು.












