ಸನ್ಮಾರ್ಗ ವಾರ್ತೆ-
ಭೋಪಾಲ, ಜ. 14: ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಗೆ ಬೆದರಿಕೆ ಪತ್ರ ಬಂದಿದೆ ಎಂದು ದೂರು ನೀಡಲಾಗಿದೆ. ಅಪಾಯಕಾರಿಯಾದ ಕೆಮಿಕಲ್ ಇದ್ದ ಕವರ್ ನಲ್ಲಿ ಪತ್ರ ಕಳುಹಿಸಲಾಗಿದೆ. ಉರ್ದುವಿನಲ್ಲಿ ಪತ್ರ ಬರೆದಿದೆ.
ಘಟನೆಯಲ್ಲಿ ಪ್ರಜ್ಞಾ ಸಿಂಗ್ ದೂರು ನೀಡಿದ್ದು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಲಕೋಟೆಯಲ್ಲಿ ಇದ್ದ ಹುಡಿ ಕೈಗೆ ಅಂಟಿದಾಗ ತುರಿಕೆ ಕಂಡು ಬಂತು ಎಂದು ಸಂಸದೆಯ ಸಹಾಯಕ ಹೇಳಿದರು. ಈ ಕೆಮಿಕಲ್ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಪೊಲೀಸರ್ ತಿಳಿಸಿದರು. ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರ ಸುರಕ್ಷೆ ಸಲಹೆಗಾರ ಅಜಿತ್ ಡೋವಲ್, ಪ್ರಜ್ಞಾ ಸಿಂಗ್ ಹೆಸರು ಇತ್ತು. ಇವುಗಳ ಮೇಲೆ ಗುಣಿಸು ಗುರುತು ಹಾಕಲಾಗಿದೆ.
ತನಗೆ ಹಿಂದೆಯೂ ಬೆದರಿಕೆ ಪತ್ರಗಳು ಬಂದಿವೆ. ಆದರೆ ಪೊಲೀಸರು ಕೇಸು ದಾಖಲಿಸಿಲ್ಲ ಎಂದು ಪ್ರಜ್ಞಾ ಠಾಕೂರ್ ಹೇಳಿದರು. ರಾಸಾಯನಿಕ ಪದಾರ್ಥಗಳ ಲಕೋಟೆ ತನಗೆ ಅಪಾಯ ಉಂಟು ಮಾಡಲಿಕ್ಕಾಗಿದೆ. ಇದರ ಹಿಂದೆ ದೇಶ ವಿರೋಧಿಗಳ ಸಂಚು ಇದೆ ಎಂದು ಪ್ರಜ್ಞಾ ಸಿಂಗ್ ಠಾಕೂರ್ ಆರೋಪಿಸಿದರು.












