ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ.14: ಭೀಂ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ರ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ದಿಲ್ಲಿ ಪೊಲೀಸರನ್ನು ಕಟುವಾಗಿ ದಿಲ್ಲಿ ತೀಸ್ ಹಝಾರಿ ಕೋರ್ಟು ತರಾಟೆಗೆತ್ತಿಕೊಂಡಿದೆ. ಪ್ರತಿಭಟಿಸುವುದರಲ್ಲಿ ತಪ್ಪೇನಿದೆ. ಜಾಮಾ ಮಸೀದಿ ಪಾಕಿಸ್ತಾನದಲ್ಲಿದೆಯೇ ಎಂದು ಕೋರ್ಟು ಕೇಳಿತು. ಪಾಕಿಸ್ತಾನದಲ್ಲಿ ಇದ್ದರೆ ಅಲ್ಲಿಗೆ ಹೋಗಿ ಪ್ರತಿಭಟಿಸಬಹುದು. ಕಾರಣ ಪಾಕಿಸ್ತಾನ ಅವಿಭಕ್ತ ಭಾರತದ ಭಾಗವಾಗಿತ್ತು ಎಂದೂ ಹೇಳಿತು.
ಧರಣಿ ನಡೆಸುವುದು, ಪ್ರತಿಭಟಿಸುವುದು ಒಬ್ಬರ ಸಂವಿಧಾನ ಪರ ಹಕ್ಕಾಗಿದೆ ಎಂದು ತೀಸ್ ಹಝಾರಿ ಸೆಶನ್ಸ್ ಜಡ್ಜ್ ಕಾಮಿನಿ ಲೋ ಹೇಳಿದರು.
ಪ್ರತಿಭಟಿಸುವುದಕ್ಕೆ ಮೊದಲೇ ಅನುಮತಿ ಪಡೆಯಬೇಕೆಂದು ಪ್ರಾಸಿಕ್ಯೂಟರ್ ಹೇಳಿದಾಗ ಜಡ್ಜ್ ಕೇಳಿದರು, “ಏಕೆ ಅನುಮತಿ? ಸೆಕ್ಷನ್ 144 ಪದೇ ಪದೇ ಹಾಕುವುದು ದುರುಪಯೋಗ ಎಂದು ಸುಪ್ರೀಂಕೋರ್ಟು ಹೇಳಿದೆ. ಪಾರ್ಲಿಮೆಂಟಿನ ಹೊರಗೆ ಈ ರೀತಿ ಪ್ರತಿಭಟಿಸಿದ ಹಲವು ಮಂದಿಯನ್ನು ನಾನು ನೋಡಿದ್ದೇನೆ. ಅವರಲ್ಲಿ ಕೆಲವರು ಈಗ ಉನ್ನತ ರಾಜಕಾರಣಿಗಳು ಮತ್ತು ಮುಖ್ಯಮಂತ್ರಿಯೂ ಆಗಿದ್ದಾರೆ. ಪ್ರಾಸಿಕ್ಯೂಟರ್ ಅವರೇ, ನೀವು ಇಂಡಿಯನ್ ಸಂವಿಧಾನ ಓದಿದ್ದೀರಾ ಎಂದು ಜಡ್ಜ್ ಕೇಳಿದರು.
ಜಾಮಾ ಮಸೀದಿ ಪ್ರತಿಭಟನೆಯಲ್ಲಿ ಚಂದ್ರಶೇಖರ್ ಆಝಾದ್ ಉದ್ರಿಕ್ತವಾಗಿ ಭಾಷಣ ಮಾಡಿದರು ಎಂದು ಡ್ರೋಣ್ ದೃಶ್ಯಗಳನ್ನು ತೋರಿಸಿ ಪ್ರಾಸಿಕ್ಯೂಟರ್ ವಾದಿಸಿದರು. ಡಿಸೆಂಬರ್ 21ರವರೆಗೆ ಆಝಾದ್ರನ್ನು ಕೋರ್ಟ್ ರಿಮಾಂಡಿನಲ್ಲಿರಿಸಿತು.












