ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ರಾಜಸ್ತಾನದಲ್ಲಿಯೂ ಪ್ರಸ್ತಾವ ಪಾಸು

0
945

ಸನ್ಮಾರ್ಗ ವಾರ್ತೆ

ಜೈಪುರ, ಜ. 25: ಕೇರಳ, ಪಂಜಾಬ್ ಬಳಿಕ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ರಾಜಸ್ತಾನ ವಿಧಾನ ಸಭೆಯಲ್ಲಿಯೂ ಪ್ರಸ್ತಾವ ಪಾಸು ಮಾಡಲಾಗಿದ್ದು ಸಿಎಎಯ ವಿರುದ್ಧ ಪ್ರಸ್ತಾವ ಪಾಸು ಮಾಡಿದ ಮೂರನೇ ರಾಜ್ಯ ರಾಜಸ್ತಾನ ಎನಿಸಿಕೊಂಡಿದೆ. ಪ್ರಸ್ತಾವ ಪಾಸು ಆಗುವ ಸಂದರ್ಭದಲ್ಲಿ ಬಿಜೆಪಿ ನಾಯಕರು ಸಿಎಎ ಬೆಂಬಲಿಸಿ ಘೋಷಣೆ ಕೂಗಿ ಪ್ರತಿಭಟಿಸಿದರು. ಕಳೆದ ದಿವಸ ಸಿಎಎಗೆ ತಡೆ ನೀಡಬೇಕೆಂಬ ಬೇಡಿಕೆಯನ್ನು ಸುಪ್ರೀಂಕೋರ್ಟು ತಳ್ಳಿಹಾಕಿತ್ತು. ಅರ್ಜಿಯಲ್ಲಿ ಉತ್ತರಿಸಲು ಮೋದಿ ಸರಕಾರಕ್ಕೆ ನಾಲ್ಕು ವಾರಗಳ ಸಮಯ ಅನುಮತಿಸಿತ್ತು.

ಪೌರತ್ವಕ್ಕೆ ಧರ್ಮವನ್ನು ಪೌರತ್ವ ತಿದ್ದುಪಡಿ ಕಾನೂನು ಮಾನದಂಡವಾಗಿ ಮಾಡಿದೆ. ಈ ರೀತಿ ಬಹುಸಂಖ್ಯಾತ ಮುಸ್ಲಿಂ ದೇಶಗಳಾದ ಪಾಕಿಸ್ತಾನ, ಬಾಂಗ್ಲದೇಶ, ಅಫ್ಘಾನಿಸ್ತಾನಗಳಿಂದ 2014 ಡಿಸೆಂಬರ್ 31 ಅಥವಾ ಅದಕ್ಕಿಂತ ಮೊದಲು ಬಂದಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಅವರು ಧಾರ್ಮಿಕ ದೌರ್ಜನ್ಯಗಳಿಗೆ ಈಡಾಗಿದ್ದರೆ ಸುಲಭದಲ್ಲಿ ಪೌರತ್ವ ಲಭಿಸಲಿದೆ.