ಇರಾನಿನ ಮಿಸೈಲ್ ದಾಳಿಯಿಂದ 34 ಅಮೆರಿಕನ್ ಸೈನಿಕರ ಮೆದುಳಿಗೆ ಏಟಾಗಿದೆ- ಪೆಂಟಗನ್

0
912

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಜ. 25: ಇರಾಕಿನಲ್ಲಿರುವ ಅಮೆರಿಕನ್ ಸೈನಿಕ ಕೇಂದ್ರಕ್ಕೆ ಇರಾನ್ ನಡೆಸಿದ ಮಿಸೈಲ್ ದಾಳಿಯಿಂದ 34 ಸೈನಿಕರ ಮೆದುಳಿಗೆ ಹಾನಿಯಾಗಿದೆ ಎಂದು ಪೆಂಟಗನ್ ತಿಳಿಸಿದೆ. ಓರ್ವ ಸೈನಿಕನಿಗೂ ಗಾಯಗಳಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‍ರ ಹೇಳಿಕೆಯನ್ನು ಪೆಂಟಗನ್ ಬಿಡುಗಡೆಗೊಳಿಸಿದ ಮಾಹಿತಿಯು ಅಲ್ಲಗಳೆದಿದೆ. ಮೆದುಳಿಗೆ ಹಾನಿಯಾಗಿರುವ ಎಂಟು ಸೈನಿಕರು ಅಮೆರಿಕಕ್ಕೆ ಶುಕ್ರವಾರ ಮರಳಿ ಬಂದಿದ್ದಾರೆ ಎಂದು ಪೆಂಟಗಾನ್ ವಕ್ತಾರ ಜೊನಾಥನ್ ಹಾಫ್‍ಮೆನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇವರಲ್ಲಿ ಹದಿನೇಳು ಮಂದಿಯನ್ನು ಚಿಕಿತ್ಸೆಗಾಗಿ ಜರ್ಮನಿಗೆ ಕಳುಹಿಸಲಾಗಿದೆ. ಒಂಬತ್ತು ಮಂದಿ ಇರಾಕಿನ ಆಸ್ಪತ್ರೆಯಲ್ಲಿದ್ದಾರೆ. ಎಂಟು ಮಂದಿಗೆ ತಜ್ಞ ಚಿಕಿತ್ಸೆ ಅಗತ್ಯವಿದ್ದು ಯುಎಸ್‍ಗೆ ಮರಳಿದ್ದಾರೆ.

ಮಿಸೈಲ್ ದಾಳಿ ಮತ್ತು ಬಲವಾದ ಸ್ಫೋಟದಿಂದ ಮೆದುಳಿಗೆ ಹಾನಿ ಸಂಭವಿಸಿತು. ಸೈನಿಕರಲ್ಲಿ ಸಣ್ಣ ತಲೆನೋವು ಇದೆ. ಯಾರಿಗೂಗಂಭೀರ ಗಾಯಗಳಾಗಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಜನವರಿ ಎಂಟರಂದು ಇರಾಕಿನ ಅಲ್ ಅಸದ್ ಸೈನಿಕ ನೆಲೆಗೆ ಇರಾನ್ ಮಿಸೈಲ್ ದಾಳಿ ನಡೆಸಿತ್ತು.