ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 31: ಜಾಮಿಅ ಮಿಲ್ಲಿಯ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ ರಾಂ ಭಕ್ತ್ ಗೋಪಾಲ್ ಗೋಡ್ಸೆಯಂತೆ ನಿಜವಾದ ದೇಶಪ್ರೇಮಿ ಎಂದು ಹಿಂದೂ ಮಹಾಸಭಾ ಹೇಳಿಕೊಂಡಿದೆ. ಜಾಮಿಅ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿ ದೇಶ್ರೋಹಿಗಳನ್ನು ಮೌನವಾಗಿಸಿದ ಹುಡುಗನ ಕುರಿತು ನಮಗೆ ಹೆಮ್ಮೆಯಾಗಿದೆ ಎಂದು ಹಿಂದೂ ಮಹಾಸಭಾ ವಕ್ತಾರ ಅಶೋಕ್ ಪಾಂಡೆ ಹೇಳಿದರು. ಶಾರ್ಜಿಲ್ ಇಮಾಮ್ರಂತಹ ಜೆಎನ್ಯು, ಅಲಿಗಡ ಮೊದಲಾದ ಯುನಿವರ್ಸಿಟಿಯ ದೇಶದ್ರೋಹಿ ವಿದ್ಯಾರ್ಥಿಗಳಿಗೆ ಗುಂಡು ಹಾರಿಸಬೇಕಾಗಿದೆ ಎಂದು ಪಾಂಡೆ ಹೇಳಿದರು. ರಾಂ ಭಕ್ತ್ ಗೋಪಾಲ್ಗೆ ಕಾನೂನು ಸಹಾಯ ನೀಡುವುದಾಗಿ ಹಿಂದೂ ಮಹಾಸಭಾ ತಿಳಿಸಿದೆ.
ರಾಂ ಭಕ್ತ್ ಗೋಪಾಲ್ ಎಂಬ ವ್ಯಕ್ತಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದನು. ಉತ್ತರ ಪ್ರದೇಶದ ಈತ ಹನ್ನೊಂದು ತರಗತಿ ವಿದ್ಯಾರ್ಥಿ ಎಂದು ದಿಲ್ಲಿ ಪೊಲೀಸರು ಹೇಳುತ್ತಿದ್ದಾರೆ. ಹದಿನೇಳು ವರ್ಷದ ಈತನ ವಿರುದ್ಧ ಕೊಲೆ ಯತ್ನ ಕೇಸು ಹಾಕಿ ದಿಲ್ಲಿ ಪೊಲೀಸ್ ಕ್ರೈಂಬ್ರಾಂಚ್ ಜುವೈನಲ್ ಜಸ್ಟಿಸ್ ಬೋರ್ಡ್ ಮುಂದೆ ಹಾಜರು ಪಡಿಸಿದ್ದಾರೆ. ಅಕ್ರಮವಾಗಿ ಆಯುಧ ವಶದಲ್ಲಿರಿಸಿಕೊಂಡ ಆರೋಪವನ್ನೂ ಈತನ ವಿರುದ್ಧ ಹೊರಿಸಲಾಗಿದೆ.












