ಸಾರ್ವಜನಿಕ ಆಸ್ತಿ ನಾಶ: ಉತ್ತರಪ್ರದೇಶ ಸರಕಾರಕ್ಕೆ ಕೋರ್ಟು ನೋಟಿಸು

0
721

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 31: ಸಾರ್ವಜನಿಕ ಆಸ್ತಿ ನಾಶಪಡಿಸಿದ ಆರೋಪ ಹೊರಿಸಿ ಸಿಎಎಯ ವಿರುದ್ಧ ಪ್ರತಿಭಟಿಸಿದವರಿಂದ ನಷ್ಟಪರಿಹಾರ ಪಡೆದುಕೊಳ್ಳಲು ಕ್ರಮ ಕೈಗೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಸುಪ್ರೀಂಕೋರ್ಟು ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ. ನಾಲ್ಕು ವಾರದೊಳಗೆ ಅಫಿದಾವಿತ್ ಮೂಲಕ ಉತ್ತರ ಸಲ್ಲಿಸಬೇಕೆಂದು ಸುಪ್ರೀಂಕೋರ್ಟು ಆದೇಶದಲ್ಲಿ ತಿಳಿಸಿದೆ. ಉತ್ತರಪ್ರದೇಶ ಸರಕಾರದ ನಷ್ಟಪರಿಹಾರ ಈಡುಗೊಳಿಸುವ ನೋಟಿಸು ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಅಕ್ರಮ, ಸಾರ್ವಜನಿಕ ಆಸ್ತಿ ನಾಶ, ಪೊಲೀಸರಿಗೆ ಹಲ್ಲೆ ಮೊದಲಾದ ಆರೋಪಗಳನ್ನು ಹೊರಿಸಲಾಗಿದೆ. ವಿವಿಧ ಪ್ರತಿಭಟನೆಗಳಲ್ಲಿ 83 ಮಂದಿಯನ್ನು ಬಂಧಸಲಾಗಿತ್ತು.

ಅಂಗಡಿಗಳು, ಖಾಸಗಿ ವಾಹನಗಳನ್ನು ಪ್ರತಿಭಟನೆಕಾರರು ನಾಶಪಡಿಸಿದ್ದಾರೆಂದು ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಆದರೆ, ಸಾಕ್ಷ್ಯಗಳನ್ನು ಬಹತೇಕವಾಗಿ ಹಾಜರು ಪಡಿಸಲು ಉತ್ತರಪ್ರದೇಶ ಪೊಲೀಸರಿಗೆ ಸಾಧ್ಯವಾಗಿಲ್ಲ. ನಂತರ 48ಕ್ಕೂ ಹೆಚ್ಚು ಮಂದಿಗೆ ಕೋರ್ಟು ಜಾಮೀನು ನೀಡಿತ್ತು.