ಪತ್ರಕರ್ತರ ವಿರುದ್ಧ ಕೇಸು: ಸೆನ್‍ಕುಮಾರ್ ಒತ್ತಡ ಹಾಕಿರಬಹುದು- ಕೇರಳ ಮುಖ್ಯಮಂತ್ರಿ

0
566

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಫೆ 3: ಪತ್ರಕರ್ತರ ವಿರುದ್ಧ ಕೇಸು ದಾಖಲಿಸಲು ಮಾಜಿ ಡಿಜಿಪಿ ಟಿಪಿ ಸೆನ್‍ಕುಮಾರ್ ಪೊಲೀಸರ ಮೇಲೆ ಒತ್ತಡ ಹಾಕಿರಬಹುದೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪತ್ರಕರ್ತರ ಮೇಲೆ ಕೇಸು ಕೊನೆಗೊಳಿಸಬೇಕು. ಪ್ರಶ್ನೆ ಕೇಳಿದ್ದಕ್ಕೆ ಕೇಸು ಹಾಕಲಾಗದು ಎಂದು ವಿಜಯನ್ ಹೇಳಿದರು. ಮಾಜಿ ಡಿಜಿಪಿ ಟಿಪಿ ಸೆನ್ ಕುಮಾರ್ ದೂರಿನಲ್ಲಿ ಕೇಸು ಹಾಕಿದ ಘಟನೆಯಲ್ಲಿ ಡಿಜಿಪಿ ವರದಿ ಕೇಳಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕಂಟೊನ್ಮೆಂಟ್ ಪೊಲೀಸರು ಕಳೆದ ದಿವಸ ಸೆನ್ ಕುಮಾರ್ ರ ದೂರಿನಲ್ಲಿ ಪತ್ರಕರ್ತರ ವಿರುದ್ಧ ಕೇಸು ಹಾಕಿದ್ದರು. ಜನವರಿ 16ರಂದು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಪಾಯವೊಡ್ಡಲು ಯತ್ನಿಸಲಾಗಿದೆ. ಅಪಮಾನಿಸಲು ಸಂಚು ನಡೆಸಲಾಯಿತು ಎಂದು ಸೇನ್ ಕುಮಾರ್ ದೂರು ನೀಡಿದ್ದರು. ಏಷ್ಯನೆಟ್ ನ್ಯೂಸ್ ಕೊಆರ್ಡಿನೇಟ್ ಎಡಿಟರ್ ಪಿಜಿ ಸುರೇಶ್ ಕುಮಾರ್, ಕಡವಿಲ್ ರಶೀದ್ ವಿರುದ್ಧ ಕಂಟೊನ್ಮೆಂಟ್ ಪೊಲೀಸರು ಕೇಸು ದಾಖಲಿಸಿದ್ದರು.