ಕೇಜ್ರಿವಾಲ್ ಭಯೋತ್ಪಾದಕ ಎಂಬುದಕ್ಕೆ ಹಲವು ಸಾಕ್ಷ್ಯಗಳಿವೆ- ಪ್ರಕಾಶ್ ಜಾವೇಡ್ಕರ್

0
753

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 3: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಯೋತ್ಪಾದಕ ಎಂಬುದಕ್ಕೆ ಹಲವು ಸಾಕ್ಷ್ಯಗಳಿವೆ ಎಂದು ಬಿಜೆಪಿ ನಾಯಕ ಪ್ರಕಾಶ್ ಜಾವೆಡ್‍ಕರ್ ಹೇಳಿದರು. “ಕೇಜ್ರಿವಾಲ್ ನಿರಪರಾಧಿಯ ವರ್ಚಸ್ಸು ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಜ್ರಿವಾಲ್ ಭಯೋತ್ಪಾದಕ ಆಗಿದ್ದಾರೆಯೇ ಎಂದು ಕೇಳಿದರೆ ಹೌದೆಂದು ಅದಕ್ಕೆ ಹಲವು ಸಾಕ್ಷ್ಯಗಳನ್ನು ನಾನು ಹೇಳುವೆ. ಒಬ್ಬ ಕ್ರಾಂತಿಕಾರಿ ಎಂದು ಕೇಜ್ರಿವಾಲ್ ಹೇಳುತ್ತಾರೆ. ಆದರೆ ಭಯೋತ್ಪಾದಕನಿಗೂ , ಕ್ರಾಂತಿಕಾರಿಗೂ ಪರಸ್ಪರ ತುಂಬ ಅಂತರವಿದೆ ಎಂದು ಜಾವೇಡ್‍ಕರ್ ಹೇಳಿದರು.

ದಿಲ್ಲಿ ವಿಧಾನಸಭೆಯ ಚುನಾವಣೆಯು ಸನ್ನಿಹಿತವಾದಾಗ ಕೇಜ್ರಿವಾಲ್‍ರ ವರ್ಚಸ್ಸನ್ನು ಕೆಡಿಸುವುದಕ್ಕೆ ಬಿಜೆಪಿ ನಿರಂತರ ಯತ್ನಿಸುತ್ತಿದೆ. ಆಮ್ ಆದ್ಮಿ ಪಾರ್ಟಿಯ ಹೆಸರನ್ನು ಮುಸ್ಲಿಂ ಲೀಗ್ ಎಂದಿರಿಸಬೇಕೆಂದು ಬಿಜೆಪಿಯ ನಾಯಕ ಕಪಿಲ್ ಮಿಶ್ರ ಟ್ವೀಟ್ ಮಾಡಿದ ಬೆನ್ನಿಗೆ ಜಾವೇಡ್ಕರ್ ಹೇಳಿಕೆ ನೀಡಿದ್ದಾರೆ.