ಶಬರಿ ಮಲೆ ಯುವತಿಯರ ಪ್ರವೇಶ: ಐವರು ಸದಸ್ಯರ ಸಂವಿಧಾನ ಪೀಠದಿಂದ ತೀರ್ಪು- ಸುಪ್ರೀಂಕೋರ್ಟು

0
619

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 3: ಶಬರಿಮಲೆಗೆ ಯುವತಿಯರ ಪ್ರವೇಶಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಗಳಲ್ಲಿ ಐವರು ಸದಸ್ಯರ ಸಂವಿಧಾನ ಪೀಠ ತೀರ್ಪು ನೀಡಲಿದೆ ಎಂದು ಸುಪ್ರೀಂಕೋರ್ಟು ಹೇಳಿದೆ. ಐವರು ಸದಸ್ಯರ ಪೀಠ ಎತ್ತಿ ತೋರಿಸಿದ ಸಂವಿಧಾನಿಕ ವಿಷಯಗಳನ್ನು ಮಾತ್ರ ಒಂಬತ್ತು ಸದಸ್ಯರ ಸಂವಿಧಾಧ ಪೀಠ ಪರಿಶೀಲಿಸುತ್ತದೆ ಎಂದು ಚೀಫ್ ಜಸ್ಟಿಸ್ ಎಚ್. ಎ. ಬೊಬ್ಡೆ ತಿಳಿಸಿದರು. ಇತರ ಧರ್ಮಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಕೂಡ ಇರುವುದರಿಂದ ಈ ತೀರ್ಮಾನ ತಳೆಯಲಾಗಿದೆ ಎಂಧು ಚೀಫ್ ಜಸ್ಟಿಸ್ ಹೇಳಿದರು.

ಪ್ರಕರಣವನ್ನು ಪೂರ್ಣ ಪೀಠಕ್ಕೊಪ್ಪಿಸಿದ ತೀರ್ಮಾನದ ವಿರುದ್ಧ ವಿವಾದವಿತ್ತು. ಮರುಪರಿಶೀಲನಾ ಅರ್ಜಿಗಳನ್ನು ವಿಶಾಲ ಪೀಠಕ್ಕೆ ವಹಿಸಿಕೊಡಲಾಗದು ಎಂದು ಹಿರಿಯ ವಕೀಲ ಫಾಲಿ ಎಸ್ ನರಿಮನ್ ಬೆಟ್ಟು ಮಾಡಿದರು. ನರಿಮನ್‍ರ ವಾದವನ್ನು ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್ ರಾಕೇಶ್ ದ್ವಿವೇದಿ ಬೆಂಬಲಿಸಿದರು. ಇದೇವೇಳೆ ಪೀಠದ ಅಧಿಕಾರ ವ್ಯಾಪ್ತಿಯ ಕುರಿತು ವಾದ ಮೊದಲೇ ನಡೆಯಬೇಕಾಗಿದೆ ಎಂದು ವಕೀಲೆ ಇಂದಿರಾ ಜೈಸಿಂಗ್ ಆಗ್ರಹಿಸಿದರು. ವಿಶಾಲ ಪೀಠಕ್ಕೆ ವಹಿಸಿಕೊಡುವ ಅಧಿಕಾರ ಚೀಫ್ ಜಸ್ಟಿಸ್‍ಗೆ ಇದೆ ಎಂದು ಕೇಂದ್ರ ಸರಕಾರ ಹೇಳಿತು.