ಮಾಸ್ಕ್ ಧರಿಸದೆ ಹೊರಗೆ? : ಚೀನದ ಡ್ರೋಣ್ ಬೇಹುಗಾರಿಕೆ-ವೀಡಿಯೊ

0
921

ಸನ್ಮಾರ್ಗ ವಾರ್ತೆ

ಬೀಜಿಂಗ್, ಫೆ. 3: ಜಗತ್ತನ್ನೇ ಸೂಜಿಮೊನೆಯಲ್ಲಿ ನಿಲ್ಲಿಸಿದ ಕೊರೊನಾ ವೈರಸ್ ವ್ಯಾಪಿಸದಂತೆ ತಡೆಯಲು ಚೀನ ತೀವ್ರ ಶ್ರಮ ನಡೆಸುತ್ತಿದೆ. ಸಾರ್ವಜನಿಕರಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆಯನ್ನು ಚೀನ ಸರಕಾರ ನೀಡಿದೆ. ಕೆಲವು ನಗರಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪ್ರತಿರೋಧಕ್ಕೆ ಮುಂಜಾಗ್ರತೆ ವಹಿಸಲಾಗುತ್ತಿದೆ. ಜನರಿಲ್ಲದ ಸಣ್ಣ ವಿಮಾನ ಡ್ರೋಣ್‍ಗಳು ಬೇಹುಗಾರಿಕೆ ನಡೆಸುತ್ತಿದೆ.

ಯಾರಾದರೂ ಮಾಸ್ಕ್ ಧರಿಸದೆ ಸುತ್ತಾಡುತ್ತಾರೋ ಇತ್ಯಾದಿ ಸೂಚನೆಗಳನ್ನು ಪಾಲಿಸದವರನ್ನು ಗುರುತಿಸಿ ಡ್ರೋಣ್ ಅವರ ಬೆನ್ನ ಹಿಂದೆ ಬಂದು ಮಾಸ್ಕ್ ಧರಿಸಲು, ಮುಂಜಾಗರೂಕತೆ ವಹಿಸಲು ಸೂಚನೆ ನೀಡುತ್ತದೆ. ಮಾಸ್ಕ್ ಧರಿಸಲು ಸೂಚಿಸುತ್ತಿರುವ ಡ್ರೋಣ್‍ಗಳನ್ನು ಅಧಿಕಾರಿಗಳು ಹೊರಬಿಟ್ಟಿದ್ದು ವೃದ್ಧೆಯೊಬ್ಬರಿಗೆ ಮನೆಗೆ ಹೋಗಿ ಮಾಸ್ಕ್ ಧರಿಸಲು ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಮಂಜು ತೆರವುಗೊಳಿಸಲು ಯತ್ನಿಸುವತ್ತಿರುವ ಒಬ್ಬ ವ್ಯಕ್ತಿಗೆ ಈ ಕೆಲಸವನ್ನು ಮತ್ತೆ ಮಾಡಲು ಮತ್ತು ಈಗಿನ ಪರಿಸ್ಥಿತಿಯಲ್ಲಿ ಮನೆಗೆ ಹೋಗಲು ಸೂಚಿಸುವುದು ವೀಡಿಯೊದಲ್ಲಿದೆ.