ಕೇರಳದಲ್ಲಿ ಲವ್ ಜಿಹಾದ್ ಇಲ್ಲ- ಕೇಂದ್ರ ಸರಕಾರ ಸ್ಪಷ್ಟನೆ

0
978

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 4: ಕೇರಳದಲ್ಲಿ ಲವ್ ಜಿಹಾದ್ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಲೋಕಸಭೆಗೆ ತಿಳಿಸಿದೆ. ಬೆನ್ನಿ ಬೆಹಾನ್ನನ್ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಗೃಹ ಸಹಾಯಕ ಸಚಿವ ನಿತ್ಯಾನಂದ ರಾಯಿ ಇದನ್ನು ಬಹಿರಂಗಪಡಿಸಿದರು. ಕೇರಳದಲ್ಲಿ ಎರಡು ಮಿಶ್ರ ಮದುವೆ ಆಗಿದೆ. ಎನ್‍ಐಎ ತನಿಖೆ ನಡೆಯುತ್ತಿದೆ. ಕಾನೂನಿನಲ್ಲಿ ಲವ್ ಜಿಹಾದ್ ವ್ಯಾಖ್ಯಾನವಿಲ್ಲ ಎಂದು ಸಚಿವರು ಹೇಳಿದರು.

ಈಗಿನ ವಿವಾದಗಳ ಹಿನ್ನೆಲೆಯಲ್ಲಿ ಬೆನ್ನಿ ಬೆಹಾನ್ನನ್ ಲೋಕಸಭೆಯಲ್ಲಿ ಈ ಪ್ರಶ್ನೆ ಎತ್ತಿದ್ದರು. ಲವ್ ಜಿಹಾದ್ ಇಲ್ಲ ಎಂದು ರಾಜ್ಯ ಸರಕಾರ ಈ ಹಿಂದೆಯೇ ತಿಳಿಸಿದೆ. ಹೈಕೋರ್ಟು, ಡಿಜಿಪಿ ಲೋಕನಾರ್ ಬೆಹ್ರಾ ಅವರು ರಾಜ್ಯದಲ್ಲಿ ಲವ್‍ ಜಿಹಾದ್ ಇಲ್ಲವೆಂದು ಹೇಳಿದ್ದರು. ಆದರೆ ಕೇರಳದಲ್ಲಿ ಲವ್ ಜಿಹಾದ್ ಹೆಚ್ಚುತ್ತಿದೆ ಎಂದು ಝಿರೊ ಮಲಬಾರ್ ಸಭಾ ಮುಖ್ಯಸ್ಥ ರು ಹೇಳಿದ್ದರು. ಈ ವಿಷಯದಲ್ಲಿ ಲೇಖನ ಬರೆಯಲಾಗಿತ್ತು. ಇದು ಝಿರೊ ಮಲಬಾರ್ ಸಭಾದ ಹೊರಗೆ ಮತ್ತು ಒಳಗೆ ತೀವ್ರ ಟೀಕೆಗೆ ಗುರಿಯಾಗಿತ್ತು.