ಭಾರತಕ್ಕೆ ಪಾಕಿಸ್ತಾನದಿಂದ ಹಿಂದೂಗಳ ಆಗಮನ

0
1313

ಸನ್ಮಾರ್ಗ ವಾರ್ತೆ

ಅಮೃತಸರ, ಫೆ. 4: ಪೌರತ್ವ ತಿದ್ದುಪಡಿ ಕಾನೂನು ಹಿನ್ನೆಲೆಯಲ್ಲಿ ವಾಘಾ ಗಡಿಯ ಮೂಲಕ ಭಾರತಕ್ಕೆ ಬರುವ ಪಾಕಿಸ್ತಾನ ಹಿಂದೂ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ. ಭಾರತದಲ್ಲಿ ಆಶ್ರಯ ಪಡೆಯುವುದು ಇವರ ಉದ್ದೇಶವಾಗಿದೆ ಎಂದು ವರದಿಯಾಗಿದೆ. ಸೋಮವಾರ ಅಟಾರಿ-ವಾಘಾ ಗಡಿಯಿಂದ ಭಾರತಕ್ಕೆ ಐವತ್ತು ಪಾಕಿಸ್ತಾನ ಹಿಂದೂ ಕುಟುಂಬಗಳ 200ಕ್ಕೂ ಹೆಚ್ಚು ಮಂದಿ ಬಂದಿದ್ದಾರೆ. ಸಂದರ್ಶನ ವೀಸಾದಲ್ಲಿ ಭಾರತಕ್ಕೆ ಬರುವ ಪಾಕಿಸ್ತಾನಿ ಹಿಂದೂಗಳ ಲೆಕ್ಕ ಕಳೆದ ತಿಂಗಳಿನಿಂದ ಹೆಚ್ಚುತ್ತಿದೆ ಎಂದು ಗಡಿಯ ಅಧಿಕಾರಿಗಳು ಹೇಳಿದರು.

ಪಾಕಿಸ್ತಾನದ ಸಿಂಧ್-ಕರಾಚಿ ಪ್ರಾಂತ್ಯದವರು ಭಾರತಕ್ಕೆ ಹೆಚ್ಚು ಬಂದಿದ್ದು ಹರಿದ್ವಾರ ಸಂದರ್ಶನ ನಡೆಸಿ ರಾಜಸ್ತಾನದಲ್ಲಿರುವ ಸಂಬಂಧಿಕರನ್ನು ಭೇಟಿಯಗಲು ಬಂದಿದ್ದೇವೆ ಎಂದು ಹೇಳಿದರೂ ದೊಡ್ಡ ಲಗೇಜುಗಳು ಹಲವರ ಬಳಿ ಇವೆ. ಭಾರತದಲ್ಲಿ ಆಶ್ರಯ ಪಡೆಯುವುದು ನಮ್ಮ ಉದ್ದೇಶ ಎಂದು ಕೆಲವರು ಹೇಳುತ್ತಿದ್ದಾರೆ. ಹರಿದ್ವಾರದ ತೀರ್ಥಯಾತ್ರೆಯ ಬಳಿಕ ಮುಂದಿನ ಯೋಜನೆಯ ಕುರಿತು ತೀರ್ಮಾನಿಸುವ ಕುರಿತು ಅವರು ಹೇಳುತ್ತಿದ್ದಾರೆ.