ಸೌದಿಯಲ್ಲಿ ಫಾರ್ಮಸಿ ಉದ್ಯೋಗದಲ್ಲೂ ಸ್ವದೇಶಿಕರಣ ಜಾರಿ

0
1267

ಸನ್ಮಾರ್ಗ ವಾರ್ತೆ

ರಿಯಾದ್, ಫೆ. 4: ಸೌದಿ ಅರೇಬಿಯದ ಖಾಸಗಿ ಕ್ಷೇತ್ರದ ಫಾರ್ಮಸಿ ಕೆಲಸವನ್ನೂ ಸ್ವದೇಶೀಕರಣ ಮಾಡಲಾಗುತ್ತಿದೆ. ಫಾರ್ಮಸಿಗಳು ಮತ್ತು ಅದಕ್ಕೆ ಸಂಬಂಧಿಸಿದ ಇತರ ಉದ್ಯೋಗಗಳನ್ನು ಸ್ವದೇಶೀಕರಣ ಜಾರಿಯ ಪ್ರಕ್ರಿಯೆಗೆ ಕಾರ್ಮಿಕ ಸಾಮಾಜಿಕ ವಿಕಾಸ ಸಚಿವ ಎನ್‍ ಜಿ. ಮುಹಮ್ಮದ್ ಅಲ್‍ ರಾಜ್‍ಹಿ ಅನುಮತಿ ನೀಡಿದರು. ಮೊದಲ ಹಂತದಲ್ಲಿ ಶೇ. 20ರಷ್ಟು ಹುದ್ದೆಗಳನ್ನು ಸ್ವದೇಶೀಕರಿಸಲಾಗುವುದು. ಈ ವರ್ಷ ಜುಲೈ 22ಕ್ಕೆ ಈ ಕ್ರಮ ಜಾರಿಯಾಗಲಿದೆ.

ಒಂದು ವರ್ಷದ ಬಳಿಕ ಎರಡನೇ ಹಂತದ ಪ್ರಕ್ರಿಯೆ ಜಾರಿಯಾಗಲಿದೆ. ಆಗ ಶೇ. 30ರಷ್ಟು ಸ್ವದೇಶೀಕರಣವಾಗಲಿದೆ. ಅದರೊಂದಿಗೆ ಶೇ. 50ರಷ್ಟು ಸ್ವದೇಶೀಕರಣ ಪೂರ್ಣಗೊಳ್ಳಲಿದೆ. ಐದಕ್ಕಿಂತ ಹೆಚ್ಚು ವಿದೇಶೀಯರಿರುವ ಸಂಸ್ಥೆಗಳಲ್ಲಿ ಸ್ವದೇಶೀಕರಣವಾಗಲಿದೆ. ಒಟ್ಟು 40,000 ಸ್ವದೇಶಿ ಯುವಕರಿಗೆ ಈ ಕ್ಷೇತ್ರದಲ್ಲಿ ಉದ್ಯೋಗ ಒದಗಿಸಲು ಈ ರೀತಿ ಸಾಧ್ಯವಾಗಲಿದೆ ಎಂದು ಉದ್ಯೋಗ ಸಚಿವಾಲಯ ತಿಳಿಸಿದೆ. ಆದರೆ ಸೌದಿ ಫುಡ್ ಆಂಡ್ ಡ್ರಗ್ಸ್ ಅಥಾರಿಟಿ ಈ ಹಿಂದೆಯೇ ಸ್ವದೇಶೀಕರಣವನ್ನು ಘೋಷಿಸಿತ್ತು ಮತ್ತು ಕೇವಲ ಉದ್ಯೋಗಗಳನ್ನು ಉದ್ಯೋಗ ಸಚಿವಾಲಯದ ಸ್ವದೇಶೀಕರಣ ಪಟ್ಟಿಯಿಂದ ಹೊರಗಿಟ್ಟಿತ್ತು. ಫಾರ್ಮುಸ್ಯೂಟಿಕಲ್ಸ್ ಮಾರ್ಕೆಟಿಂಗ್ ಸ್ಪೆಶಲಿಸ್ಟ್ , ಔಷಧ ಏಜೆನ್ಸಿಗಳು, ಫ್ಯಾಕ್ಟರಿಗಳು ಈ ಪಟ್ಟಿಯಲ್ಲಿರುವ ಸ್ವದೇಶೀಕರಣದ ಹೊಣೆ ಫುಡ್ಸ್ ಆಂಡ್ ಡ್ರಗ್ಸ್ ಅಥಾರಿಟಿ ಹೊಂದಿದೆ ಎಂದು ಉದ್ಯೋಗ ಸಚಿವಾಲಯ ಹೇಳಿದೆ.

ಆರೋಗ್ಯ ಕ್ಷೇತ್ರದ ಸ್ವದೇಶೀಕರಣ ಜಾರಿಗೊಳಿಸುವ ಅಂಗವಾಗಿ ಉದ್ಯೋಗ ಸಚಿವಾಲಯ ಹೊಸ ಯೋಜನೆಯನ್ನು ರೂಪಿಸಿದೆ. ಆರೋಗ್ಯ ಸಚಿವಾಲಯ, ಮಾನವ ಸಂಪನ್ಮೂಲ ಸಚಿವಾಲಯ, ಫುಡ್ಸ್ ಆಂಡ್ ಡ್ರಗ್ಸ್ ಅಥಾರಿಟಿ ಸಹಕಾರದೊಂದಿಗೆ ಸ್ವದೇಶೀಕರಣವನ್ನು ಜಾರಿಗೊಳಿಸಲಾಗುವುದು ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.