ತನ್ನ ಹಿಂದುತ್ವ ಬಿಜೆಪಿಯಿಂದ ಭಿನ್ನ: ಪೌರತ್ವ ಸಾಬೀತು ಪಡಿಸುವುದು ಹಿಂದೂಗಳಿಗೂ ಮುಸ್ಲಿಮರಿಗೂ ಕಷ್ಟದ ವಿಚಾರ. ಅಂತಹದೊಂದು ಸ್ಥಿತಿ ಬರದಿರಲಿ- ಉದ್ಧವ್ ಠಾಕ್ರೆ

0
1171

ಸನ್ಮಾರ್ಗ ವಾರ್ತೆ

ಮುಂಬೈ, ಫೆ. 5: ತನ್ನ ಹಿಂದುತ್ವ ಬಿಜೆಪಿಯಿಂದ ವಿಭಿನ್ನವೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಹೇಳಿದರು. ಅಧಿಕಾರ ಗಳಿಸುವುದು ತನ್ನ ಹಿಂದುತ್ವದ ಭಾಗವಲ್ಲ. ನಮ್ಮ ಇಬ್ಬರ ಆಶಯ ಒಂದೇ ಅಲ್ಲ. ಹಿಂದುತ್ವ ರಾಷ್ಟ್ರ ಬೇಕೆಂದು ತಾನು ಬಯಸುವುದಿಲ್ಲ. ಅದರಿಂದ ಎಂದೂ ಶಾಂತಿ ನೆಲಸದು. ಧರ್ಮ ಉಪಯೋಗಿಸಿ ಅಧಿಕಾರ ಹಿಡಿಯವುದು ತನ್ನ ಅಜೆಂಡಾದ ಹಿಂದುತ್ವ ಅಲ್ಲ ಎಂದು ಠಾಕ್ರೆ ಹೇಳಿದರು.

ದೇಶದಲ್ಲಿ ಒಬ್ಬನನ್ನು ಧರ್ಮದ ಹೆಸರಲ್ಲಿ ಕೊಲ್ಲುವುದು ಹಿಂದೂ ರಾಷ್ಟ್ರದ ಭಾಗವಲ್ಲ. ನಾನು ಅದು ಕಲಿತವನಲ್ಲ. ಪೌರತ್ವ ತಿದ್ದುಪಡಿ ಕಾನೂನು ಪೌರತ್ವ ತೆಗೆಯುವುದಲ್ಲ ನೀಡುವುದಕ್ಕಿರುವುದು. ಪೌರತ್ವ ಸಾಬೀತು ಪಡಿಸುವುದು ಹಿಂದೂಗಳಿಗೂ ಮುಸ್ಲಿಮರಿಗೂ ಕಷ್ಟದ ವಿಚಾರ. ಅಂತಹದೊಂದು ಸ್ಥಿತಿ ಬರದಿರಲಿ ಎನ್ನುವುದು ನನ್ನ ಬಯಕೆಯಾಗಿದೆ.