ಪೌರತ್ವ ತಿದ್ದುಪಡಿ ಕಾನೂನಿಂದ ಮುಸ್ಲಿಮರಿಗೆ ತೊಂದರೆಯಿಲ್ಲ- ರಜನೀಕಾಂತ್

0
608

ಸನ್ಮಾರ್ಗ ವಾರ್ತೆ

ಚೆನ್ನೈ, ಫೆ. 5: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ದೇಶವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ವೇಳೆ ತಮಿಳು ನಟ ರಜನೀಕಾಂತ್ ಪೌರತ್ವ ತಿದ್ದುಪಡಿ ಕಾನೂನನ್ನು ಬೆಂಬಲಿಸಿದ್ದಾರೆ. ಮುಸ್ಲಿಮರಿಗೆ ಈ ಕಾನೂನು ಬೆದರಿಕೆಯಲ್ಲ ಎಂದು ಅವರು ಹೇಳಿದ್ದಾರೆ.

ಮುಸ್ಲಿಮರು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದರೆ ಅವರಿಗಾಗಿ ತಾನು ಧ್ವನಿ ಎತ್ತುವೆ. ಹೊರಗಿನಿಂದ ಬಂದವರನ್ನು ಕಂಡು ಹುಡುಕಲು ಎನ್‍ಆರ್ ಸಿ ಅಗತ್ಯವಿದೆ. ರಾಷ್ಟ್ರೀಯ ಪೌರತ್ವ ಪಟ್ಟಿಗೆ ಇದುವರೆಗೆ ರೂಪು ನೀಡಿಲ್ಲ ಎಂಬುದು ಸ್ಪಷ್ಟ ಎಂದು ರಜನೀಕಾಂತ್ ಹೇಳಿದರು. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ದಿಲ್ಲಿಯ ಶಾಹಿನ್ ಬಾಗ್ ಸಹಿತ ದೇಶಾದ್ಯಂತ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಶಾಹಿನ್‍ಬಾಗ್‍ನಲ್ಲಿ ಮಹಿಳೆಯರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಐವತ್ತು ದಿನ ಸಂದಿದೆ.

ವಿಶ್ವವಿದ್ಯಾನಿಲಯಗಳನ್ನು ಕೇಂದ್ರೀಕರಿಸಿ, ಗ್ರಾಮ ನಗರ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹಿತ ವಿದ್ಯಾರ್ಥಿಗಳು ಸೇರಿ ಜಾತಿ, ಧರ್ಮ , ಲಿಂಗ ವಯಸ್ಸಿನ ಅಂತರವಿಲ್ಲದೆ ಜನರು ಪ್ರತಿಭಟನೆಯಲ್ಲಿ ಸಕ್ರಿಯರಾಗಿದ್ದಾರೆ. ಇದೇ ವೇಳೆ ರಜನೀಕಾಂತ್ ಸಿಎಎ ಮತ್ತು ಎನ್‍ಆರ್ ಸಿ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.