ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 6: ಶಾಹಿನ್ ಬಾಗ್ನಲ್ಲಿ ಗುಂಡು ಹಾರಿಸಿದ ಆರೋಪಿ ಕಪಿಲ್ ಗುಜ್ಜಾರ್ ನ ತಂದೆಯು ತನ್ನ ಮಗ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರ ಸೇವಕನೆಂದು ಬಹಿರಂಗಪಡಿಸಿದ್ದಾರೆ. ಈ ಹಿಂದೆ ತನ್ನ ಮಗ ರಾಜಕೀಯದಲ್ಲಿ ಇರಲಿಲ್ಲ ಎಂದು ತಂದೆ ಹೇಳಿದರು. ಶಾಹಿನ್ ಬಾಗ್ನಲ್ಲಿ ಗುಂಡು ಹಾರಾಟ ನಡೆಸಿದ ವ್ಯಕ್ತಿ ಎಎಪಿ ಕಾರ್ಯಕರ್ತ ಎಂದು ಪೊಲೀಸರು ಹೇಳುತ್ತಿದ್ದಾರೆ. ಈತನಿಗೆ ಎಎಪಿಯೊಂದಿಗೆ ಸಂಬಂಧ ಇದೆ ಎಂದು ತೋರಿಸುವ ಚಿತ್ರಗಳನ್ನು ಪೊಲೀಸರು ಹೊರಬಿಟ್ಟಿದ್ದರು.
ಅದರೆ ಆರೋಪಿಯ ತಂದೆ ಇವೆಲ್ಲವನ್ನೂ ನಿರಾಕರಿಸಿದ್ದು , ಇದರ ಬೆನ್ನಿಗೆ ಪುತ್ರನ ಬಿಜೆಪಿ ಸಂಬಂಧವನ್ನು ಗುಜ್ಜಾರ್ ನ ತಂದೆ ಬಹಿರಂಗಪಡಿಸಿದರು. ಇದೇ ವೇಳೆ, ದಿಲ್ಲಿ ಪೊಲೀಸರು ಗೃಹ ಸಚಿವಾಲಯದಿಂದ ಬಂದ ಆದೇಶಗಳನ್ನು ಸ್ವೀಕರಿಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ನಾಯಕ ಸಂಜಯ್ ಸಿಂಗ್ ಆರೋಪ ಹೊರಿಸಿ ರಂಗಪ್ರವೇಶಿಸಿದ್ದಾರೆ.












