ಸನ್ಮಾರ್ಗ ವಾರ್ತೆ
ಚೆನ್ನೈ, ಫೆ. 7: ಆದಿವಾಸಿ ಮಕ್ಕಳಿಂದ ಚಪ್ಪಲಿಯನ್ನು ಬಿಚ್ಚಿಸಿದ ತಮಿಳ್‍ನಾಡು ಅರಣ್ಯ ಇಲಾಖೆ ಸಚಿವ ದಿಂಡಿಗಲ್ ಶ್ರೀನಿವಾಸನ್ ಮುದುಮಲೈ ವರ್ತನೆಯು ವಿವಾದ ಸೃಷ್ಟಿಸಿದೆ. ಸಂರಕ್ಷಣೆ ವಲಯ ಪ್ರದೇಶದ ಸಂದರ್ಶನದ ವೇಳೆ ಎಐಡಿಎಂಕೆ ನಾಯಕ ಮುದುಮಲೈ ಈ ರೀತಿ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಮುದುಮಲೈ ಹುಲಿ ಸಂರಕ್ಷಣಾ ಪ್ರದೇಶದ ಆನೆ ಸಂರಕ್ಷಣಾ ಕೇಂದ್ರವನ್ನು ಉದ್ಘಾಟಿಸಲು ಬಂದಿದ್ದರು. ಸಮೀಪದ ದೇವಸ್ಥಾನ ಪ್ರವೇಶಿಸಲು ಮುಂದಾದ ಸಚಿವರು ಆದಿವಾಸಿ ಮಕ್ಕಳನ್ನು ಕರೆಯಿಸಿ ತಮ್ಮ ಚಪ್ಪಲಿ ಬಿಚ್ಚುವಂತೆ ಹೇಳಿದ್ದಾರೆ.
ಮಕ್ಕಳು ನೆಲಕ್ಕೆ ಬಗ್ಗಿ ಚಪ್ಪಲಿ ಬಿಚ್ಚಿಸಿದ್ದು ಮತ್ತು ಸಚಿವರು ನಗುವುದು ವೀಡಿಯೊದಲ್ಲಿ ಕಾಣಬಹುದಾಗಿದೆ. ಸಚಿವರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಮಂದಿ ತೀವ್ರವಾಗಿ ಸಚಿವರನ್ನು ಟೀಕಿಸಿದ್ದಾರೆ.
#WATCH Tamil Nadu minister Dindigul C Srinivasan makes a boy remove his sandals during the Minister's visit to Mudumalai National Park. pic.twitter.com/L4dZr8Q33y
— ANI (@ANI) February 6, 2020












