25 ರೂಪಾಯಿಗೆ ಊಟ- ಹಸಿವುರಹಿತ ಕೇರಳಕ್ಕೆ ಚಾಲನೆ

0
541

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಸೆ. 7: ಹಸಿವು ರಹಿತ ರಾಜ್ಯವನ್ನಾಗಿಸುವಲ್ಲಿ ಕೇರಳ ಸರಕಾರ ವಿಶೇಷ ಯೋಜನೆ ತಂದಿದೆ. 20 ಕೋಟಿ ರೂಪಾಯಿಯನ್ನು ಇದಕ್ಕಾಗಿ ಕೇರಳ ಸರಕಾರ ಬಜೆಟ್‍ನಲ್ಲಿ ಮೀಸಲಾಗಿಟ್ಟಿದೆ. ಹಸಿವು ರಹಿತ ಕೇರಳ ಯೋಜನೆಗೆ ಆಹಾರ ಇಲಾಖೆ ಯೋಜನೆ ರೂಪಿಸಿದ್ದು ಸ್ವಯಂಸೇವಾ ಸಂಘಟನೆಗಳ ಮೂಲಕ ಇದನ್ನು ಜಾರಿಗೆ ತರಲಾಗುವುದು. ಮಲಗಿದಲ್ಲೇ ದಿನದೂಡುತ್ತಿರುವ ರೋಗಿಗಳಿಗೆ ಉಚಿತವನ್ನು ಊಟವನ್ನು ಮನೆಗೆ ತಲುಪಿಸಿ ಕೊಡಲಾಗುವುದು.

ಕುಟುಂಬ ಶ್ರೀಯ ನೇತೃತ್ವದಲ್ಲಿ 25 ರೂಪಾಯಿಗೆ ಊಟ ನೀಡುವ 1000 ಹೋಟೇಲುಗಳನ್ನು ಆರಂಭಿಸಲಾಗುವುದು. ಶೇ. 10ರಷ್ಟು ಊಟ ಉಚಿತವಾಗಿ ಪ್ರಾಯೋಜಕರ ಮೂಲಕ ಕೊಡಲಾಗುವುದು. ಇದಕ್ಕೆಂದು ಸ್ವಯಂಸೇವಾ ಸಂಘಟನೆಗಳು, ಸಂಸ್ಥೆಗಳನ್ನು ಆಯ್ಕೆ ಮಾಡಿದರೆ ರೇಷನ್ ದರದಲ್ಲಿ ಸಾಮಾನುಗಳನ್ನು ಸಿವಿಲ್ ಸಪ್ಲೈಸ್ ಕಾರ್ಪೊರೇಷನ್ ಒದಗಿಸಿಕೊಡಲಿದೆ. ಈ ಮಾನದಂಡದಲ್ಲಿ ಅಂಬಲಪುಝಚ-ಚೆರ್ತಲ ತಾಲೂಕುಗಳನ್ನು ಹಸಿವುರಹಿತ ವಲಯವಾಗಿ ಎಪ್ರಿಲ್ ತಿಂಗಳಿನಿಂದ ಘೋಷಿಸಲಾಗುವುದು. 2020-21ರಲ್ಲಿ ಯೋಜನೆಯನ್ನು ಇತರ ಕಡೆಗೂ ವಿಸ್ತರಿಸಲಾಗುವುದು.