ಹಿಂದೂ ಸಂಘಟನೆಯ ಬೆದರಿಕೆ; ಗಾಂಧಿ ಭಾಷಣ ಸರಣಿ ರದ್ದು

0
785

ಸನ್ಮಾರ್ಗ ವಾರ್ತೆ

ಪುಣೆ, ಫೆ. 8: ಹಿಂದೂ ಸಂಘಟನೆಯ ಬೆದರಿಕೆಯ ನಂತರ ಪುಣೆಯ ಮಾಡೆಲ್ ಕಾಲೇಜಿನಲ್ಲಿ ನಡೆಸಬೇಕಾಗಿದ್ದ ಮಹಾತ್ಮಗಾಂಧಿ ಭಾಷಣ ಸರಣಿ ರದ್ದಾಗಿದೆ. ಪತಿತ್ ಪಾವನ್ ಸಂಘಟನೆ ಬೆದರಿಕೆ ಹಾಕಿದೆ. ಎರಡು ದಿವಸದ ಕಾರ್ಯಕ್ರಮವನ್ನು ರದ್ದುಪಡಿಸದಿದ್ದರೆ ಕಠಿಣ ಪ್ರತ್ಯಾಘಾತಕ್ಕೆ ಸಿದ್ಧರಾಗಿ ಎಂದು ಸಂಘಟನೆ ಬೆದರಿಕೆ ಹಾಕಿದೆ. ಮಹಾತ್ಮಾಗಾಂಧಿಯ ಮೊಮ್ಮಗ ತುಷಾರ್ ಗಾಂಧಿ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದರು. ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮ ರದ್ದುಪಡಿಸಿದ್ದಕ್ಕೆ ಕಾರಣ ತಿಳಿಸಿಲ್ಲ ಎಂದು ತುಷಾರ್ ಗಾಂಧಿ ಹೇಳಿದರು. ಆದರೆ ಇತರ ಭಾಷಣಕಾರರಲ್ಲಿ ಮಾತಾಡಿದಾಗ ಬೆದರಿಕೆಯ ಕುರಿತು ಅವರು ತನಗೆ ತಿಳಿಸಿದರು ಎಂದು ತುಷಾರ್ ಗಾಂಧಿ ಹೇಳಿದ್ದಾರೆ.

ಪ್ರೊಗ್ರಸಿವ್ ಎಜುಕೇಶನ್ ಸೊಸೈಟಿ ಕಾಲೇಜು ನಿರ್ವಹಿಸುತ್ತಿದೆ. ಭೀಮ-ಕೊರೆಗಾಂವ್ ಸಂಘಟನೆಯ ಆರೋಪಿಯಾಗಿರುವ ಹಿಂದೂ ಬ್ರಾಹ್ಮಣ ನಾಯಕ ಮಿಲಿಂದ ಎಕ್‍ಬೊತೆಯ ಹಿರಿಯ ಸಹೋದರ ಡಾ. ಗಜಾನನ್ ಏಕ್‍ಬೊತೆ ಇದರ ಅಧ್ಯಕ್ಷರು. ಕಾರ್ಯಕ್ರಮ ರದ್ದಾಗಿರುವುದನ್ನು ಕಾಲೇಜು ಅಧಿಕೃತವಾಗಿ ಪ್ರಕಟಿಸಿಲ್ಲ. ತುಷಾರ್ ಗಾಂಧಿ, ಮಹಾರಾಷ್ಟ್ರ ಗಾಂಧಿ ಸ್ಮಾರಕ ನಿಧಿ ಕಾರ್ಯದಶಿ ರಾಜನ್ ಅನ್ವರ್, ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆಂಡ್ ರಿಸರ್ಚ್ ಅಸೊಸಿಯೇಟ್ ಪ್ರೊಫೆಸರ್ ಚೈತ್ರ ರೆದ್‍ಕರ್, ಪುಣೆ ವಿಶ್ವವಿದ್ಯಾನಿಲಯ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರುತಿ ತಾಂಬೆ ಮುಂತಾದ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಹಿಂದೆಯೂ ಪುಣೆಯಲ್ಲಿ ಆಯೋಜಿಸಿದ್ದ ಇಂತಹ ಕಾರ್ಯಕ್ರಮವನ್ನು ಪತಿತ್‍ ಪಾವನ್ ಸಂಘಟನೆಯ ಬೆದರಿಕೆಯಿಂದ ರದ್ದುಪಡಿಸಲಾಗಿತ್ತು ಎಂದು ವರದಿ ತಿಳಿಸಿದೆ.