ಕೈಯಲ್ಲಿ ಹಣವಿಲ್ಲ; ಕೋರ್ಟಿನಲ್ಲಿ ಅಂಬಾನಿ

0
2748

ಸನ್ಮಾರ್ಗ ವಾರ್ತೆ

ಮುಂಬೈ, ಫೆ. 8: ಚೀನದ ಬ್ಯಾಂಕಿನಿಂದ ತೆಗೆದ 680 ಕೋಟಿ ಮಿಲಿಯನ್ ಡಾಲರ್ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ ಎಂದು ರಿಲಯನ್ಸ್ ಕಮ್ಯುನಿಕೇಶನ್ ಮಾಜಿ ಚೇರ್ಮೆನ್ ಅನಿಲ್ ಅಂಬಾನಿ ಹೇಳಿದ್ದಾರೆ. ಮೂರು ಚೈನಿಸ್ ಬ್ಯಾಂಕುಗಳು ಇಂಗ್ಲೆಂಡಿನಲ್ಲಿ ಕೇಸು ಹಾಕಿದ್ದು ಅನಿಲ್ ಅಂಬಾನಿ ಇದಕ್ಕೆ ಉತ್ತರ ನೀಡಿದ್ದಾರೆ. ಇಂಡಸ್ಟ್ರಿಯಲ್ ಕಮರ್ಸಿಯಲ್ ಬ್ಯಾಂಕ್ ಆಫ್ ಚೀನ, ಚೈನೀಸ್ ಡೆವಲಪ್ ಮೆಂಟ್ ಬ್ಯಾಂಕ್, ಎಕ್ಸ್ ಪೋರ್ಟ್ ಆಂಡ್ ಇಂಪೋರ್ಟ್ ಬ್ಯಾಂಕ್ ಆಫ್ ಚೀನ ಇವು ಇಂಗ್ಲೆಂಡಿನಲ್ಲಿ ಕೇಸು ಹಾಕಿದೆ.

ಮೂರು ಬ್ಯಾಂಕುಗಳಿಂದ ಅಂಬಾನಿ ವೈಯಕ್ತಿಕ ಜಾಮೀನಿನಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ ಸಂಸ್ಥೆಗೆ 925 ಮಿಲಿಯನ್ ಡಾಲರ್ ಸಾಲ ನೀಡಿತ್ತು. ಇದರಲ್ಲಿ ಒಂದು ಭಾಗವನ್ನು ಕಂಪೆನಿ ಮರುಪಾವತಿಸಿತ್ತು. 2017ರಲ್ಲಿ ಮರುಪಾವತಿಯ ಇನ್ನೊಂದು ಗಡು ಆರಂಭವಾಗಿತ್ತು. ಆದರೆ ಅದನ್ನು ಪಾವತಿ ಮಾಡಿರಲಿಲ್ಲ. ಪ್ರಕರಣದಲ್ಲಿ ಉತ್ತರ ನೀಡಿದ ಅಂಬಾನಿ ತನ್ನ ಶೇರುಗಳ ಮೌಲ್ಯ 82.4 ಮಿಲಿಯನ್ ಡಾಲರ್ ಗೆ ಕುಸಿದಿದೆ ಎಂದು ತಿಳಿಸಿದ್ದಾರೆ. ಹೊಣೆಗಾರಿಕೆ ನಿರ್ವಹಿಸಿ ತನ್ನ ಕೈಯಲ್ಲಿ ಉಳಿಯುವ ಮೊತ್ತ ಶೂನ್ಯ ಎಂದು ಕೋರ್ಟಿಗೆ ಅನಿಲ್ ಅಂಬಾನಿ ಹೇಳಿದ್ದಾರೆ.

ಸಹೋದರ ಮುಖೇಶ್ ಅಂಬಾನಿ ಸಹಿತ ಯಾರಿಂದಲೂ ಸಾಲದ ಮೊತ್ತವನ್ನು ಸಂಗ್ರಹಿಸುವುದು ಸಾಧ್ಯವಿಲ್ಲ ಎಂದು ಅನಿಲ್ ಅಂಬಾನಿ ಕೋರ್ಟಿಗೆ ತಿಳಿಸಿದ್ದಾರೆ. ಏಷ್ಯದಲ್ಲಿ ಅತ್ಯಂತ ದೊಡ್ಡ ಶ್ರಿಮಂತ ಮುಖೇಶ್ ಅಂಬಾನಿಯಾಗಿದ್ದಾರೆ. ಅವರ ಆಸ್ತಿ 55.6 ಬಿಲಿಯನ್ ಡಾಲರ್ ಆಗಿದೆ.