ಸನ್ಮಾರ್ಗ ವಾರ್ತೆ
ಬೆಂಗಳೂರು, ಫೆ. 8: ದಿಲ್ಲಿ ವಿಧಾನಸಭೆಗೆ ಮತದಾನ ಪ್ರಗತಿಯಲ್ಲಿದ್ದು ಮುಸ್ಲಿಂ ಮಹಿಳಾ ಮತದಾರರನ್ನು ಕರ್ನಾಟಕ ಬಿಜೆಪಿ ರಾಜ್ಯಘಟಕ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಪಹಾಸ್ಯ ಮಾಡಿದೆ. ದಿಲ್ಲಿ ಮತದಾನದ ವೇಳೆ ಸರತಿ ಸಾಲಿನಲ್ಲಿರುವ ಮುಸ್ಲಿಂ ಮಹಿಳೆಯರು ಮತದಾರ ಚೀಟಿಯನ್ನು ಎತ್ತಿ ತೋರಿಸುವ ವೀಡಿಯೊವನ್ನು ಶೇರ್ ಮಾಡಿ ದಾಖಲೆಗಳನ್ನು ಸರಿಯಾಗಿ ತೆಗೆದುಇಟ್ಟುಕೊಳ್ಳಿ ಎನ್ಪಿಆರ್ ಜಾರಿಗೊಳಿಸುವಾಗ ಪುನಃ ತೋರಿಸಬೇಕಾದೀತು ಎಂದು ಕಮೆಂಟು ಮಾಡಿದೆ.
ಅಲ್ಲದೆ, ಕಾಗಝ್ ನಹಿ ದಿಕಾಯೇಂಗೇ (ನಾವು ದಾಖಲೆ ತೊರಿಸುವುದಿಲ್ಲ) ಎಂದು ಬರೆದಿದೆ. ಭಾರತಾದ್ಯಂತ ಸಿಐಎ-ಎನ್ಆರ್ ಸಿ ವಿರುದ್ಧ ಹೋರಾಟದಲ್ಲಿ ಕಾಗಝ್ ನಹಿ ದಿಖಾಯೇಂಗೆ ಹಂ ಎಂಬುದು ಘೋಷಣೆಯಾಗಿದೆ.
"Kaagaz Nahi Dikayenge Hum" ! ! !
Keep the documents safe, you will need to show them again during #NPR exercise.#DelhiPolls2020 pic.twitter.com/bEojjeKlwI
— BJP Karnataka (@BJP4Karnataka) February 8, 2020












