ಸಿಎಎ ಪ್ರತಿಭಟನೆ: 200 ಮಂದಿಗೆ ಮುಂಬೈ ಪೊಲೀಸರಿಂದ ನೋಟಿಸು

0
610

ಸನ್ಮಾರ್ಗ ವಾರ್ತೆ

ಮುಂಬೈ, ಫೆ. 10: ಸಿಎಎ ಪ್ರತಿಭಟನಾಕಾರರ ವಿರುದ್ಧ ಮುಂಬೈ ಪೊಲೀಸರು ನೋಟಿಸು ಜಾರಿ ಮಾಡಿದ್ದು ಸಿಆರ್‍ಪಿಸಿ ಸೆಕ್ಷನ್‍ನ ವಿವಿಧ ಕಲಂ ಪ್ರಕಾರ ಕೇಸು ದಾಖಲಿಸಲಾಗಿದೆ. ಮೊರ್ಲಾಂಡ್ ರಸ್ತೆಯ ಪ್ರತಿಭಟನಾಕಾರರ ವಿರುದ್ಧ ಬೃಹನ್‍ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ದೂರಿನಲ್ಲಿ ಇವರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಪ್ರತಿಭಟನಾಕಾರರಿಗೆ ಕಾರಣ ಸೂಚಿಸಬೇಕೆಂದು ನೋಟಿಸಿನಲ್ಲಿ ಹೇಳಲಾಗಿದೆ. ಇದಕ್ಕೆ ಉತ್ತರಿಸದಿದ್ದರೆ ಬಂಧಿಸಲಾಗುವುದು ಎಂದು ಡೆಪ್ಯುಟಿ ಕಮಿಶನರ್ ಅಭಿಶೇಕ್ ಕುಮಾರ್ ತಿಳಿಸಿದರು. ಆಝಾದ್ ಮೈದಾನಕ್ಕೆ ಪ್ರತಿಭಟನೆಯನ್ನು ವರ್ಗಾಯಿಸದಿದ್ದರೆ ಕಠಿಣ ಕ್ರಮ ಸ್ವೀಕರಿಸಲಾಗುವುದು ಎಂದು ಮುಂಬೈ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದೇ ವೇಳೆ,

ಪ್ರತಿಭಟನಾಕಾರರಾದ ಮಹಿಳೆಯರನ್ನು ತಪ್ಪುಕಲ್ಪನೆಗೆ ದೂಡಿ ನೋಟಿಸಿಗೆ ಸಹಿ ಹಾಕಿಸಲಾಗಿದೆ ಎಂಬ ಆರೋಪವು ಕೇಳಿ ಬಂದಿದೆ. ಪೊಲೀಸರು ಕೇಸನ್ನು ಮುಂದುವರಿಸಿದರೆ ಅದನ್ನು ಎದುರಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.