ಆಮ್ ಆದ್ಮಿಯ ಪ್ರಚಂಡ ಮುನ್ನಡೆಯಲ್ಲೂ ಬೆವರಿದ ಸಿಸೊಡಿಯ

0
1196

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ.11: ಹ್ಯಾಟ್ರಿಕ್ ಗೆಲುವಿನೆಡೆಗೆ ದಾಪುಗಾಲಿಡುವ ಆಮ್ ಆದ್ಮಿ ಪಾರ್ಟಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ಮೂರನೆ ಬಾರಿ ಗೆಲುವಿಗಾಗಿ ಪರದಾಡುತ್ತಿದ್ದಾರೆ. ಅವರು ಉಪಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಾಗಿದ್ದಾರೆ. ಮುನ್ನಡೆಯ ಪ್ರಮಾಣ ಅದಲು ಬದಲಾಗುತ್ತಿದೆ. ಇಲ್ಲಿ ಅವರ ನಿಕಟ ಸ್ಪರ್ಧಿ ಬಿಜೆಪಿಯ ರವೀಂದರ್ ಸಿಂಗ್ ನೇಗಿಯಾಗಿದ್ದು ಕಾಂಗ್ರೆಸ್ ಇಲ್ಲಿ ಸಂಖ್ಯೆಗುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಮುನ್ನಡೆಯ ಸ್ಥಿತಿ ಅದಲು ಬದಲಾಗುತ್ತಿದ್ದು ಚುನಾವಣೆಯ ಮೊದಲೇ ಪಟ್‍ವರ್‍ಗಂಜ್‍ನಲ್ಲಿ ಬಿರುಸಿನ ಹೋರಾಟ ಇದೆ ಎಂದು ಹೇಳಲಾಗಿತ್ತು. ಆಮ್ ಆದ್ಮಿಯ ಪ್ರಮುಖ ನಾಯಕ ಸಿಸೊಡಿಯ ಗೆಲುವು ಆಮ್ ಆದ್ಮಿಗೆ ಪ್ರಮುಖವಾಗಿದೆ. 1998ರಿಂದ 2013ರವರೆಗೆ ಈ ಕ್ಷೇತ್ರ ಕಾಂಗ್ರೆಸ್‍ನ ಕೋಟೆಯಾಗಿತ್ತು. 1993ರಲ್ಲಿ ಇಲ್ಲಿಂದ ಬಿಜೆಪಿ ಗೆಲುವು ಸಾಧಿಸಿತ್ತು.