ಇಸ್ರೇಲ್ ಕಂಪೆನಿಗೆ ಪೊಲೀಸ್ ರಹಸ್ಯ ಸೋರಿಕೆ ಮಾಡಿದ ಆಂಧ್ರ ಇಂಟಲಿಜೆನ್ಸ್ ಮಾಜಿ ಮುಖ್ಯಸ್ಥನ ಅಮಾನತು

0
1191

ಸನ್ಮಾರ್ಗ ವಾರ್ತೆ

ಅಮರಾವತಿ, ಫೆ. 11: ರಾಜ್ಯ ಪೊಲೀಸರ ರಹಸ್ಯಗಳನ್ನು ಇಸ್ರೇಲಿನ ಕಂಪೆನಿಗೆ ಸೋರಿಕೆ ಮಾಡಿದ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಡಿಜಿಪಿ ರ್ಯಾಂಕಿನ ಅಧಿಕಾರಿ ಎ ಬಿ ವೆಂಕಿಟೇಶ್ವರ ರಾವ್‍ರನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಗೌತಂ ಸಾವಂಗ್‍ರ ವರದಿಯ ಆಧಾರದಲ್ಲಿ ಆಂಧ್ರ ಸರಕಾರ ಅಮಾನತುಗೊಳಿಸಿದೆ. ತೆಲುಗು ದೇಶಂ ಪಾರ್ಟಿ ಅಧಿಕಾರದಲ್ಲಿದ್ದಾಗ ಅವರು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯಿಡುಗೆ ನಿಕಟವರ್ತಿಯಾಗಿದ್ದರು ಮತ್ತು ಅವರು ಚಂದ್ರ ಬಾಬು ನಾಯಿಡುರಿಗಾಗಿ ಕೆಲಸ ಮಾಡಿದ್ದರು ಎಂದು ಅವರನ್ನು ಗುಪ್ತಚರ ವಿಭಾಗದಿಂದ ಬದಲಾಯಿಸಲಾಗಿತ್ತು.

ಇದನ್ನು ವೆಂಕಿಟೇಶ್ವರ ರಾವ್ ನಿರಾಕರಿಸಿದ್ದು ಪ್ರಕರಣದ ವಿರುದ್ಧ ಕಾನೂನಿನ ಎಲ್ಲ ಮಾರ್ಗಗಳನ್ನು ಹುಡುಕುವೆ ಮತ್ತು ಸತ್ಯ ಜನರಿಗೆ ತಿಳಿಸುವೆ ಎಂದು ಅವರು ಹೇಳಿದರು. ರಾಜಕೀಯ ಹಗೆ ಸಾಧನೆಯು ರಾವ್ ವಿರುದ್ಧ ಕ್ರಮ ಎಂದು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯಿಡು ಆರೋಪಿಸಿದ್ದಾರೆ.