ಯುಎಇಯಲ್ಲಿ ಭಾರತೀಯನಿಗೆ ಕೊರೊನಾ

0
723

ಸನ್ಮಾರ್ಗ ವಾರ್ತೆ

ದುಬೈ, ಫೆ.11: ಯುಎಇಯಲ್ಲಿ ಮತ್ತೊಬ್ಬರು ಕೊರೊನಾ ವೈರಸ್ ಪೀಡಿತರಾಗಿದ್ದಾರೆ. ರೋಗಿಯ ಸಮೀಪದಲ್ಲಿ ಅಡ್ಡಾಡಿದ್ದ ಭಾರತೀಯ ವ್ಯಕ್ತಿ ಕೊರೊನಾಕ್ಕೊಳಗಾಗಿದ್ದು ದೃಢಪಟ್ಟಿದ್ದು ಇದನ್ನು ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ಯುಎಇ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರೊಂದಿಗೆ ಯುಎಇಯಲ್ಲಿ ಕೊರೊನಾ ದಾಂಧಲೆಯಿಟ್ಟವರ ಸಂಖ್ಯೆ ಎಂಟಕ್ಕೆ ತಲುಪಿತು. ರೋಗಿಯಾಗಿದ್ದ ಎಪ್ಪತ್ತೆಂಟು ವರ್ಷದ ಚೀನದ ಮಹಿಳೆ ಪೂರ್ಣ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ವರದಿಯಾದ ಎಂಟು ಪ್ರಕರಣಗಳಲ್ಲಿ ಏಳು ಮಂದಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದ್ದು ಇನ್ನೊಬ್ಬ ತಜ್ಞ ವೈದ್ಯರ ನಿಗಾದಲ್ಲಿ ಐಸಿಯುನಲ್ಲಿದ್ದಾರೆ. ಪರೀಕ್ಷೆಗಳು, ನಿಗಾ ಮೊದಲಾದ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿತು. ಆದ್ದರಿಂದ ಜನರಲ್ಲಿ ಯಾವುದೇ ರೀತಿಯ ಆತಂಕ ಬೇಡ. ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಂಡು ರೋಗ ಹರಡುವ ಪರಿಸ್ಥಿತಿ ಇಲ್ಲದಂತೆ ಮಾಡಬೇಕೆಂದು ಆರೋಗ್ಯ ಸಚಿವಾಲಯ ಜನರಿಗೆ ಮುನ್ನೆಚ್ಚರಿಕೆ ನೀಡಿದೆ.