ಭಾಷಣ ಲೈವ್ ಆಗಿಲ್ಲ; ಮುನಿಸಿಕೊಂಡ ರಾಜ್ಯಪಾಲರು

0
644

ಸನ್ಮಾರ್ಗ ವಾರ್ತೆ

ಕೊಲ್ಕತಾ, ಫೆ 11: ರಾಜ್ಯಪಾಲರ ಭಾಷಣವನ್ನು ಯಥಾಸಮಯ ಪ್ರಸಾರ ಮಾಡಿಲ್ಲ ಎಂದು ಪಶ್ಚಿಮಬಂಗಾಳ ರಾಜ್ಯಪಾಲರು ತನ್ನದೇ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್‍ಕರ್ ತನ್ನ ಭಾಷಣ ಲೈವ್‍ಗೆ ಸರಕಾರ ಅನುಮತಿಸಿಲ್ಲ ಎಂದು ಮುನಿಸು ತೋರಿದರು. ವಿತ್ತ ಸಚಿವರ ಬಜೆಟ್ ಚ್ಯಾನೆಲ್‍ಗಳಲ್ಲಿ ಲೈವ್ ಆಗಿತ್ತು. ಆದರೆ, ರಾಜ್ಯಪಾಲರ ಭಾಷಣ ಯಥಾಸಮಯ ಪ್ರಸಾರವಾಗಿರಲಿಲ್ಲ. ಘಟನೆಯ ಬಗ್ಗೆ ರಾಜ್ಯದ ಜನರೇ ತೀರ್ಪು ನೀಡಲಿ ಎಂದು ರಾಜ್ಯಪಾಲರು ಟ್ವೀಟ್ ಮಾಡಿದರು. ಫೆಬ್ರವರಿ ಏಳಕ್ಕೆ ರಾಜ್ಯಪಾಲರು ಸದನ ಉದ್ದೇಶಿಸಿ ಭಾಷಣ ಮಾಡಿದ್ದರು. ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ಕೆಳಕಾಲದಿಂದ ಅಸಮಾಧಾನ ನೆಲೆಸಿದೆ. ಸರಕಾರದ ಧೋರಣೆಯ ಭಾಷಣವನ್ನು ರಾಜ್ಯಪಾಲರು ಓದುವರೇ ಎಂಬುದೇ ಸಂದೇಹದಲ್ಲಿತ್ತು.

ರಾಷ್ಟ್ರೀಯ ಪೌರತ್ವ ಪಟ್ಟಿ, ಪೌರತ್ವ ತಿದ್ದುಪಡಿ ಕಾನೂನು ವಿಷಯಗಳಲ್ಲಿ ವಿರೋಧ ಇವೆಲ್ಲವನ್ನೂ ಪೂರ್ಣವಾಗಿ ರಾಜ್ಯಪಾಲರು ವಾಚಿಸಿದ್ದರು. ರಾಜ್ಯಪಾಲರ ಭಾಷಣೆ ನೇರ ಪ್ರಸಾರಕ್ಕೆ ಅನುಮತಿ ನೀಡದಿರುವ ಕುರಿತು ಮುಖ್ಯಮಂತ್ರಿ ನೋ ಕಮೆಂಟ್ಸ್ ಎಂದು ಹೇಳಿದ್ದಾರೆ. ಸ್ಪೀಕರ್ ಬಿಮನ್ ಬ್ಯಾನರ್ಜಿಯವರಲ್ಲಿ ಈ ಕುರಿತು ವಿಚಾರಿಸಿ ಎಂದರು.