ಸನ್ಮಾರ್ಗ ವಾರ್ತೆ
ಅಗರ್ತಲ, ಫೆ.13: ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಶ್ರಮಿಸಿದ ಒಂಬತ್ತು ಮಂದಿ ಬಾಂಗ್ಲಾದೇಶಿ ಹಿಂದೂಗಳನ್ನು ತ್ರಿಪುರದ ವೆಸ್ಟ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಗ್ರಾಮದಿಂದ ಬಂಧಿಸಲಾಗಿದೆ. ಎರಡು ಮತ್ತು 75 ವರ್ಷಗಳ ನಡುವಿನ ಮೂವರು ಮಹಿಳೆಯರು, ಮೂವರು ಪುರುಷರು, ಮೂವರು ಮಕ್ಕಳನ್ನು ಬಂಧಿಸಲಾಗಿದೆ. ಸಿಧಾಯ್ ಪೊಲೀಸ್ ಠಾಣೆಯ ವ್ಯಾಪ್ತಿಯ ಮತಾಯ್ ಗ್ರಾಮದಲ್ಲಿ ಇವರು ಅಲೆದಾಡುತ್ತಿದ್ದರು. ಸೋಮವಾರ ಅವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಭಾರತದಲ್ಲಿ ವಾಸಿಸುವುದು ಇವರ ಉದ್ದೇಶವಾಗಿದೆ ಎಂದು ಸ್ಥಳೀಯ ಶಾಸಕ ಬಿಜೆಪಿ ಸರಕಾರದ ಮೈತ್ರಿ ಪಕ್ಷವಾದ ಪೀಪಲ್ಸ್ ಆಫ್ ತ್ರಿಪುರ ನಾಯಕ ಬಿಷ್ ಕೇತು ದೆಬ್ಬಾರ್ಮ ತಿಳಿಸಿದರು.
ನಾವು ಯಾವುದೇ ಧರ್ಮ, ಜಾತಿಗಳ ವಿರೋಧಿಗಳಲ್ಲ. ಬಾಂಗ್ಲಾ ದೇಶೀಯರಿಗೆ ಭಾರತದಲ್ಲಿ ವಾಸಿಸಲು ಅಧಿಕೃತ ಅನುಮತಿ ನೀಡಬಾರದು. ನಾವು ಬಿಜೆಪಿಯೊಂದಿಗಿದ್ದರೂ ಪೌರತ್ವ ತಿದ್ದುಪಡಿ ಕಾನೂನಿಗೆ ನಾವು ವಿರೋಧವಿದ್ದೇವೆ ಎಂದು ಅವರು ಹೇಳಿದರು.












