ನಟ ವಿಜಯ್ ವಿರುದ್ಧ ಆದಾಯ ತೆರಿಗೆ ಇಲಾಖೆಯ ಕ್ರಮಕ್ಕೆ ಅವರ ಮತಾಂತರ ಕಾರಣವೇ? ಹೋಗಿ ಬೇರೆ ಕೆಲಸ ನೋಡಿ ಅಂದ್ರು ವಿಜಯ್ ಸೇತುಪತಿ

0
1639

ಸನ್ಮಾರ್ಗ ವಾರ್ತೆ

ತಮಿಳ್ನಾಡು, ಫೆ. 13: ಸಾಮಾಜಿಕ ಮಾಧ್ಯಮಗಳಲ್ಲಿ ಮತಾಂತರ ವಿವಾದಕ್ಕೆ ಸಂಬಂಧಿಸಿ ವಿಜಯ್ ಸೇತುಪತಿ ಟ್ವೀಟ್ ಮಾಡಿದ್ದಾರೆ. “ಹೋಗಿ ಬೇರೆ ಕೆಲಸ ಇದ್ದರೆ ಮಾಡಿ(ಪೊಯಿ ವೇರೆ ವೇಲೈ ಇರುಂದಾ ಪಾರುಂಗಡಾ…” ಎಂದು ಒಂದೇ ವಾಕ್ಯದ ಟ್ವೀಟ್ ಮಾಡಿದ್ದು ನಟ ವಿಜಯ್ ವಿರುದ್ಧ ಆದಾಯ ತೆರಿಗೆ ಇಲಾಖೆಯ ಕ್ರಮದ ಹಿನ್ನೆಲೆಯಲ್ಲಿ ಮತಾಂತರವೇ ಐಟಿ ದಾಳಿಯ ಹಿಂದೆ ನಿಜವಾದ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ. ಇದಕ್ಕೆ ಸೇತುಪತಿ ಉತ್ತರವಾಗಿ ಈ ಟ್ವೀಟ್ ಮಾಡಿದ್ದಾರೆ.

ರಮೇಶ್ ಖನ್ನ, ಆರತಿ ಮೊದಲಾದವರು ಕ್ರೈಸ್ತಧರ್ಮ ಸ್ವೀಕರಿಸಿದ್ದಾರೆ ಎಂಬ ಪ್ರಚಾರ ನಡೆಯುತ್ತಿದೆ. ವಿಜಯ್ ನಿಕಟವರ್ತಿಯಾದ ಖಾಸಗಿ ಕಾಲೇಜು ಒಡತಿ ಇದಕ್ಕೆ ಮುಂದಾಳುತ್ವ ವಹಿಸಿದ್ದರು. ಇದು ಆದಾಯ ತೆರಿಗೆ ದಾಳಿಗೆ ಕಾರಣವೆಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರವಾಗುತ್ತಿತ್ತು.

ವಿಜಯ್ ನಾಯಕನಾಗಿರುವ ಮಾಸ್ಟರ್ ಸಿನೆಮಾದಲ್ಲಿ ವಿಜಯ್ ಸೇತುಪತಿಗೆ ಮುಖ್ಯ ಭೂಮಿಕೆ ಇದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬಳಿಕ ವಿಜಯ್ ತನ್ನ ಹೆಸರನ್ನು ವಿಜಯ್ ಜೋಸೆಫ್ ಎಂದು ಬದಲಿಸಿರುವುದಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜ ಈ ಹಿಂದೆ ಆರೋಪಿಸಿದ್ದರು.