ಸನ್ಮಾರ್ಗ ವಾರ್ತೆ
ಶಿವಮೊಗ್ಗ; ಫೆ. 15- ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಧರಣಿ ಸತ್ಯಾಗ್ರಹವು ಇವತ್ತು ಸಂಜೆ ಮುಕ್ತಾಯಗೊಂಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯು ಈ ದೇಶದ ಸಂವಿಧಾನಕ್ಕೆ ಮತ್ತು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದ್ದು ತಾರತಮ್ಯದಿಂದ ಕೂಡಿದೆ. ಇದು ಭಾರತದ ಜಾತ್ಯತೀತ ಪರಂಪರೆಗೆ ಅಂತ್ಯ ಹಾಡಲಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಮುಂದೆ ಬರಲಿರುವ ಎನ್ ಆರ್ ಸಿ ಮತ್ತು ಎನ್ಟಿಆರ್ ಅನ್ನು ಕೂಡ ವೆಲ್ಫೇರ್ ಪಾರ್ಟಿ ಪ್ರಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
ಈ ಸಭೆಯಲ್ಲಿ ವೆಲ್ಫೇರ್ ಪಾರ್ಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್, WPI ಜಿಲ್ಲಾ ಅಧ್ಯಕ್ಷ ಮುಝಮ್ಮಿಲ್ ಅನ್ವರ್, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ವಹಾಬ್, WPI ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆ ವಾಜಿಹ ನಿಶಾತ್, DSS ಜಿಲ್ಲಾ ಅಧ್ಯಕ್ಷ ಶೇಷಪ್ಪ, ಸ್ವರಾಜ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಶ್ರೀಪಾಲ್, ಸಿಟಿಝೆನ್ ಯುನೈಟೆಡ್ ಮೂವ್ ಮೆಂಟ್ ನ ಜಿಲ್ಲಾ ಅಧ್ಯಕ್ಷ ನ್ಯಾ. ಶೆಹರಾಜ್ ಮುಜಾಹಿದ್ ಸಿದ್ದಿಕಿ, ಸಾಮಾಜಿಕ ಕಾರ್ಯಕರ್ತ ಶ್ರೀಕುಮಾರ್, ಜಮಾಅತೆ ಇಸ್ಲಾಮಿ ಹಿಂದ್ ನ ಮುಲ್ಲಾ ಲಿಯಾಖತ್ ಮುಲ್ಲಾ, ಆಜ್ ಕಾ ಇಂಕಿಲಾಬ್ ಡೈಲಿ ಯ ಸಂಪಾದಕ ಮುದಸ್ಸಿರ್ ಅಹ್ಮದ್ ಮತ್ತು ಹೈಕೋರ್ಟ್ ನ್ಯಾಯವಾದಿ ಲೋಕನಾಥ್ ಉಪಸ್ಥಿತರಿದ್ದರು.













