ಸನ್ಮಾರ್ಗ ವಾರ್ತೆ
ಹೊಸದಿಲ್ಲ, ಫೆ. 17: ಮತದಾರರಿಗೆ ತಮ್ಮ ಮತಗಟ್ಟೆಗೆ ಹೋಗದೆ ಸೌಲಭ್ಯ ಇರುವಲ್ಲಿ ಮತದಾನ ಮಾಡಲು ಸಾಧ್ಯವೆ? ಈ ವಿಷಯದಲ್ಲಿ ಚುನಾವಣಾ ಆಯೋಗ ಮತ್ತು ಐಐಟಿ ಮದ್ರಾಸ್ ಕೈಜೋಡಿಸುತ್ತಿದೆ. ಇದು ಸಂಶೋಧನಾ ಹಂತದಲ್ಲಿದ್ದು ಮೊದಲ ಮಾದರಿಯನ್ನು ಅಭಿವೃದ್ಧಿ ಪಡಿಸುವ ಕ್ರಮ ಜಾರಿಯಲ್ಲಿದೆ ಎಂದು ಹಿರಿಯ ಚುನಾವಣಾ ಆಯೋಗ ಅಧಿಕಾರಿ ತಿಳಿಸಿದ್ದಾರೆ. ಪೂರ್ವ ನಿಗದಿಯಂತೆ ಮತದಾರರಿಗೆ ನಿಶ್ಚಿತ ಸಮಯದಲ್ಲಿ ಹತ್ತಿರದ ಮತಗಟ್ಟೆಗೆ ಬಂದು ಮತದಾನ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.ಎ ಇ-ಬ್ಯಾಲೆಟ್ ಪೇಪರ್ ಉಪಯೋಗಿಸಿ ಮತದಾನ ಮಾಡಲಾಗುತ್ತದೆ. ಆದರೆ, ಇದು ಸಾಕ್ಷಾತ್ಕಾರಗೊಳ್ಳಲು ಸಮಯ ಬೇಕು. ಬಯೊಮೆಟ್ರಿಕ್ ವಿವರಗಳು, ವೆಬ್ ಕ್ಯಾಮರಗಳನ್ನು ಉಪಯೋಗಿಸಿ ಯೋಜನೆ ಜಾರಿಗೊಳಿಸಲಾಗುವುದು. ಮತದಾನ ಮಾಡಲು ಆದರೆ ಇದನ್ನು ಅಭ್ಯರ್ಥಿಗಳಿಗೂ ಪಾರ್ಟಿಗಳಿಗೂ ತಿಳಿಸಲಾಗುವುದು. ಮತ ಎಣಿಕೆಯಾಗುವಾಗ ಇದನ್ನುಮರುಪರಿಶೀಲಿಸಿ ಮತದಾನದಲ್ಲಿ ಮೋಸ ನಡೆದಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಲಾಗುವುದು.
ಚುನಾವಣೆ ನಡೆದಾಗ ಚೆನ್ನೈಯ ಮತದಾರ ದಿಲ್ಲಿಯಲ್ಲಿದ್ದರೆ ಊರಿಗೆ ಬರದೆ ಮತದಾನ ಮಾಡಲು ಸಾಧ್ಯವಿದೆ. ಚುನಾವಣಾ ಆಯೋಗ ನಿರ್ಧರಿಸಿದ ಮತಗಟ್ಟೆಯಲ್ಲಿ ನಿಗದಿತ ಸಮಯದಲ್ಲಿ ಇವರು ಮತದಾನ ಮಾಡಬಹುದು ಎಂದು ಸೀನಿಯರ್ ಡೆಪ್ಯುಟಿ ಇಲಕ್ಷನ್ ಕಮಿಶನರ್ ಸಂದೀಪ್ ಸಕ್ಸೇನಾ ಹೇಳಿದರು.












