ಇಬ್ಬರು ದಲಿತ ಯುವಕರನ್ನು ಅಮಾನುಷವಾಗಿ ಥಳಿಸಿ ಚಿತ್ರಹಿಂಸೆ ನೀಡಿದರು: ವ್ಯಾಪಕ ಆಕ್ರೋಶ; ವೀಡಿಯೊ

0
2134

ಸನ್ಮಾರ್ಗ ವಾರ್ತೆ

ಇಬ್ಬರು ದಲಿತ ಯುವಕರನ್ನು ಗುಂಪೊಂದು ಥಳಿಸಿ ಹಿಂಸಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ್ ಪೊಲೀಸರು ಬುಧವಾರ ಐವರನ್ನು ಬಂಧಿಸಿದ್ದಾರೆ ಎಂದು ನಾಗೌರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಕಾಸ್ ಪಾಠಕ್ ತಿಳಿಸಿದ್ದಾರೆ.

ಫೆಬ್ರವರಿ 16 ರಂದು ನಾಗೌರ್‌ನ ಪಂಚೌಡಿ ಪ್ರದೇಶದ ಕಾರ್ನು ಗ್ರಾಮದಲ್ಲಿ ಸಂಭವಿಸಿದ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ದುಷ್ಕರ್ಮಿಗಳು ಸ್ಕ್ರೂಡ್ರೈವರ್ ಅನ್ನು ಪೆಟ್ರೋಲ್ ನಲ್ಲಿ ಮುಳುಗಿಸಿ ಅದನ್ನು ಬಲಿಪಶುವಿನ ಗುದನಾಳದಲ್ಲಿ ತೂರಿಸುವುದನ್ನು ವೀಡಿಯೊ ತೋರಿಸಿದೆ. ಮೋಟಾರ್ ಸೈಕಲ್ ಶೋ ರೂಂನ ಹಣದ ಚೀಲದಿಂದ ಈ ದಲಿತರಿಬ್ಬರು ಹಣವನ್ನು ಕದಿಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹನುಮಾನ್ ಸಿಂಗ್, ಐದಾನ್ ಸಿಂಗ್, ರಘುವೀರ್ ಸಿಂಗ್, ಚೈಲ್ ಸಿಂಗ್ ಮತ್ತು ರೆಹಮತುಲ್ಲಾ ಬಂಧಿತರಾಗಿದ್ದು, ಇವರಲ್ಲಿ ಹನುಮಾನ್ ಮಾಲೀಕರಾಗಿದ್ದರೆ, ಇತರರು ಏಜೆನ್ಸಿಯಲ್ಲಿ ಕೆಲಸ ಮಾಡುವವರು. ಆರೋಪಿಗಳ ಮೇಲೆ ಎಸ್‌ಸಿ / ಎಸ್‌ಟಿ ಕಾಯ್ದೆಯ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಸಂತ್ರಸ್ತರನ್ನು ಬಿಸಾ ರಾಮ್ (25) ಮತ್ತು ಪನ್ನಾ ಲಾಲ್ (18) ಎಂದು ಗುರುತಿಸಲಾಗಿದೆ.

“ದಲಿತ ವ್ಯಕ್ತಿಯನ್ನು ಹಿಂಸಿಸಲು, ಅದನ್ನು ರೆಕಾರ್ಡ್ ಮಾಡಲು ಮತ್ತು ವೀಡಿಯೊವನ್ನು ಹಂಚಿಕೊಳ್ಳಲು ಈ ಮನದಿಗೆ ಏನು ಧೈರ್ಯಬಂತು? ನಾವು ಇನ್ನೂ ಮಧ್ಯಕಾಲೀನ ಕಾಲದಲ್ಲಿ ವಾಸಿಸುತ್ತಿದ್ದೇವೆ ಎಂದು ಅನಿಸುತ್ತದೆ ”ಎಂದು ಜೈಪುರದ ದಲಿತ ಹಕ್ಕುಗಳ ಕೇಂದ್ರದ ಮುಖ್ಯಸ್ಥ ಮಿಮ್ರೋತ್ ಹೇಳಿದ್ದಾರೆ.