ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 20: ನಿರ್ಭಯ ಪ್ರಕರಣದಲ್ಲಿ ಗಲ್ಲು ಶಿಕ್ಷೆ ತೀರ್ಪು ಪ್ರಕಟವಾಗಿರುವ ನಾಲ್ವರು ಆರೋಪಿಗಳಲ್ಲಿ ವಿನಯ್ ಶರ್ಮ ಜೈಲಿನ ಗೋಡೆಗೆ ತಲೆ ಬಡಿದು ಸ್ವಯಂ ಗಾಯ ಮಾಡಿಕೊಂಡಿದ್ದಾನೆ. ಫೆಬ್ರವರಿ ಹದಿನಾರರಂದು ತಿಹಾರ್ ಜೈಲಿನಲ್ಲಿ ವಿನಯ್ ಶರ್ಮ ಸ್ವಯಂ ಗಾಯ ಮಾಡಿಕೊಂಡಿದ್ದಾನೆ. ಈತನಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಸಿದ್ದಾರೆ. ಕಳೆದವಾರ ವಿನಯ್ ಶರ್ಮ ಅನ್ನ ಸತ್ಯಾಗ್ರಹ ಮಾಡಿದ್ದನು.
ಈತ ಮಾನಸಿಕ ಅಸ್ವಸ್ಥನಾಗಿದ್ದು ಈತನಿಗೆ ಗಲ್ಲು ಶಿಕ್ಷೆ ನೀಡಬಾರದೆಂದು ಆತನ ವಕೀಲರು ಮನವಿ ಮಾಡಿದ್ದಾರೆ. ನಂತರ ವಿನಯ್ ಶರ್ಮನಿಗೆ ವಿಶೇಷ ಗಮನ ನೀಡಬೇಕೆಂದು ಜೈಲು ಸುಪರಿಡೆಂಟ್ಗೆ ಕೋರ್ಟು ಸೂಚಿಸಿತ್ತು. ಗಲ್ಲು ಶಿಕ್ಷೆ ಜಾರಿ ತಡವಾಗಲು ಆರೋಪಿಗಳು ಉದ್ದೇಶ ಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಕೋರ್ಟು ಈ ಹಿಂದೆ ಹೇಳಿತ್ತು. ನಿರ್ಭಯ ಪ್ರಕರಣದ ಆರೋಪಿಗಳಿಗೆ ಮಾರ್ಚ್ 3ರಂದು ಗಲ್ಲುಶಿಕ್ಷೆ ನೀಡಲಾಗುವುದು. ಕಳೆದ ಸೋಮವಾರ ಪಟಿಯಾಲ ಕೋರ್ಟು ಹೊಸ ಮರಣ ವಾರಂಟ್ ಹೊರಡಿಸಿತ್ತು.












