ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 29: ದೇಶದ್ರೋಹಿಗಳಿಗೆ ಗುಂಡಿಕ್ಕಿ (ದೇಶ್ ಕಿ ಗದ್ದಾರೋಂಕೊ ಗೋಲಿ ಮಾರೊ ) ಎಂಬ ಘೋಷಣೆ ಕೂಗಿದ ಆರು ಮಂದಿಯನ್ನು ದಿಲ್ಲಿ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಕೇಸರಿ ಬಣ್ಣದ ಟೀಶರ್ಟ್, ಕುರ್ತಾ ಧರಿಸಿ ಆರು ಮಂದಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದರು. ನಂತರ ಎಲ್ಲರೂ ಸೇರಿ ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂದು ಘೋಷಣೆ ಕೂಗಿದ್ದಾರೆ. ಇದರ ವೀಡಿಯೊ ದೃಶ್ಯ ವ್ಯಾಪಕವಾಗಿ ಪ್ರಚಾರವಾಗುತ್ತಿದೆ. ನಂತರ ಸಿಐಎಸ್ಎಫ್ ಯುವಕರನ್ನು ಕಸ್ಟಡಿಗೆ ಪಡೆದು ದಿಲ್ಲಿ ಪೊಲೀಸರ ವಶಕ್ಕೊಪ್ಪಿಸಿದೆ.












