ಸನ್ಮಾರ್ಗ ವಾರ್ತೆ
ದೋಹ, ಮಾ.13: ಕೊರೊನಾ ಹಿನ್ನೆಲೆಯಲ್ಲಿ ದೇಶದಲ್ಲಿ ಮಸೀದಿಗಳಲ್ಲಿ ಅದಾನ್ ಕರೆದು ಐದೇ ನಿಮಿಷದಲ್ಲಿ ಜಮಾಅತ್ ನಮಾಝ್ ನಿರ್ವಹಿಸಿ ಬಿಡಬೇಕೆಂದು ಕತಾರ್ ಔಕಾಫ್ ಇಸ್ಲಾಮಿಕ್ ವಿಷಯ ಸಚಿವಾಲಯ ಸೂಚನೆ ಹೊರಡಿಸಿದೆ. ಪ್ರತಿ ನಮಾಝ್ ಮುಗಿದು ಹದಿನೈದು ನಿಮಿಷದೊಳಗೆ ಮಸೀದಿ ಮುಚ್ಚಬೇಕು. ಮಸೀದಿ ಕೂಡಲೇ ಶುಚಿಗೊಳಿಸಬೇಕು. ಪರಿಸರ ಸಹಿತ ಶುಚಿಗೊಳಿಸಬೇಕು. ದಿವಸವೂ ಶುಚೀಕರಣ ಪ್ರಕ್ರಿಯೆ ಮೇಲೆ ನಿಗಾ ಇರಿಸಬೇಕು.
ವೈರಸ್ ಬಾಧೆಗೆ ಕಾರಣ ಆಗಬಾರದು. ವಾಟರ್ ಕೂಲರ್ ಗಳ ಜೊತೆಗೆ ಕಪ್ಗಳು, ಸೋಪುಗಳು, ಮಾಲಿನ್ಯಪೆಟ್ಟಿಗೆ ಶುಚಿಮಾಡಬೇಕು. ಬಾಗಿಲು ಕಿಟಕಿ ತೆರದಿಟ್ಟು ಮಸೀದಿಯೊಳಗೆ ಗಾಳಿ ಸಂಚಾರ ವಾಗುವಂತೆ ನೋಡಿಕೊಳ್ಳಬೇಕು. ಜ್ವರ, ನೆಗಡಿ ಬದಲಾಗುವವರೆಗೆ ಮಸೀದಿಗೆ ಬರಬಾರದೆಂದು ಸೂಚನೆ ನೀಡಲಾಗಿದೆ.












