ಸನ್ಮಾರ್ಗ ವಾರ್ತೆ
ಬ್ರಸಲ್ಸ್, ಮಾ. 14: ಯುರೋಪಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಾಲು ಲಕ್ಷಕ್ಕೇರಿಕೆಯಾಗಿದೆ. ಇದು 27 ಯುರೋಪಿಯನ್ ದೇಶಗಳ ಸ್ಥಿತಿಯಾಗಿದ್ದು ವೈರಸ್ ಹರಡದಂತೆ ತಡೆಯಲು ಫ್ರಾನ್ಸ್, ಸ್ಪೈನ್, ಅಯರ್ಲೆಂಡ್, ಆಸ್ಟ್ರೀಯ, ನೋರ್ವೆ, ಡೆನ್ಮಾಕ್ ತೀವ್ರ ಕ್ರಮ ಕೈಗೊಂಡಿದೆ. ಕ್ರೀಡೆ, ಸಾಂಸ್ಕøತಿಕ, ರಾಜಕೀಯ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಶಾಲೆ, ಫಾಕ್ಟರಿ ಮುಚ್ಚಲಾಗಿದೆ. ಅನಿವಾರ್ಯ ಪರಿಸ್ಥಿತಿಯಲ್ಲಲ್ಲದೆ ಹೊರಗೆ ಬರಬಾರದೆಂದು ಹೇಳಲಾಗಿದೆ. ಹಲವು ಕಂಪೆನಿ ಸಿಬ್ಬಂದಿಗಳು ಮನೆಯಲ್ಲೇ ಕೆಲಸಮಾಡಿದರೆ ಸಾಕೆಂದು ಆದೇಶ ಹೊರಡಿಸಿವೆ. ವೈರಸ್ ತಗಲಿದ್ದು ಮೊದಲು ಚೀನದ ವುಹಾನದಲ್ಲಿ. ಆದರೆ ಅಲ್ಲಿ ಈಗ ಹೊಸ ಪ್ರಕರಣಗಳು ಕಂಡು ಬಂದಿಲ್ಲ.
ಚೀನದ ಬಳಿಕ ದಕ್ಷಿಣ ಕೊರಿಯಕ್ಕೆ ವೈರಸ್ ಬಂತು. ಅಲ್ಲಿಯೂ ಹೊಸ ಕೇಸುಗಳು ಕಡಿಮೆಯಾಗಿವೆ. ಕೊರೊನಾ ಇದ್ದವರಲ್ಲಿ ಹಲವರು ಗುಣಮುಖರಾಗಿದ್ದಾರೆ. ನೋರ್ವೆಯಲ್ಲಿ ಮೊದಲ ಸಾವು ದೃಢೀಕರಣವಾಗಿದೆ. ಘಾನ, ಕೆನಿಯ, ಇತಿಯೋಪಿಯದಲ್ಲಿ ವೈರಸ್ ಕಂಡು ಬಂದಿದೆ












