ನಮ್ಮಲ್ಲಿ ಒಂದು ವಾರ ಕಟ್ಟೆಚ್ಚರ: ಥಿಯೇಟರ್, ಮಾಲ್‍ಗಳು ಬಂದ್

0
484

ಸನ್ಮಾರ್ಗ ವಾರ್ತೆ

ಬೆಂಳೂರು, ಮಾ.14: ಕೊರೊನಾ ಭೀತಿಯಿಂದ ದೇಶದಲ್ಲಿ ಮೊದಲ ಸಾವು ಕಲಬುರಗಿಯಲ್ಲಿ ದೃಢಪಟ್ಟಿದ್ದು ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುರ್ತುಕ್ರಮಕ್ಕೆ ಸರಕಾರ ಮುಂದಾಗಿದೆ. ಶನಿವಾರದಿಂದ ಮುಂದಿನ ಒಂದು ವಾರಕ್ಕೆ ಕರ್ನಾಟಕದ ಶಾಪಿಂಗ್ ಮಾಲ್‍ಗಳು, ಥಿಯೇಟರ್ ಗಳು, ಮಲ್ಟಿಪ್ಲೆಕ್ಸ್ ಗಳು, ವಾಣಿಜ್ಯ ಸಂಕೀರ್ಣಗಳು, ಪಬ್‍ಗಳು ಮುಚ್ಚಿಡಬೇಕೆಂದು ಸರಕಾರ ಆದೇಶಿಸಿದೆ. ರಾಜ್ಯದಲ್ಲಿ ಕ್ರೀಡಾ ಸ್ಪರ್ಧೆ ಮಾಡಬಾರದೆಂದು ಸರಕಾರ ಆದೇಶ ಹೊರಡಿಸಿದೆ. ಜೊತೆಗೆ ಶಾಲೆ, ವಿಶ್ವವಿದ್ಯಾನಿಲಯ, ಕಾಲೇಜುಗಳಿಗೆ ಒಂದು ವಾರ ರಜೆ. ಪ್ರತಿರೋಧ ಕ್ರಮದ ಭಾಗವಾಗಿ ಜನರು ಸೇರುವ ಎಲ್ಲ ಸ್ಥಳಗಳು ವಾಣಿಜ್ಯ ಸಮುಚ್ಚಯಗಳು ತಾತ್ಕಾಲಿಕವಾಗಿ ಮುಚ್ಚಿಡಬೇಕೆಂದು ಸರಕಾರ ಆದೇಶದಲ್ಲಿ ವಿವರಿಸಲಾಗಿದೆ.

ಜನರ ಸುರಕ್ಷೆಗಾಗಿ ಈ ಎಲ್ಲ ನಿಯಂತ್ರಣಗಳಿದ್ದು ಒಂದು ವಾರದ ಬಳಿಕ ಪರಿಸ್ಥಿತಿಯನ್ನು ಅಂದಾಜಿಸಿ ಮುಂದಿನ ನಿರ್ಧಾರವನ್ನು ಸರಕಾರ ಪ್ರಕಟಿಸುತ್ತದೆ. ಒಂದುವಾರ ಬೆಂಗಳೂರು ಮತ್ತು ರಾಜ್ಯದ ಇತರ ಸ್ಥಳಗಳ ಐಟಿ ಕಂಪೆನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಹೇಳಬೇಕು. ಕಲಬುರಗಿಯಲ್ಲಿ ಮೃತಪಟ್ಟಿರುವವರೊಬ್ಬರ ಸಹಿತ ಬೆಂಗಳೂರಿನಲ್ಲಿ ಐವರಿಗೆ ಕೊರೊನಾ ಇದ್ದು ಐಸೋಲೇಶನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಸೆಸ್ಸೆಲ್ಸಿ ಪರೀಕ್ಷೆ ಮುಂದುವರಿಯಲಿದೆ. ಇತರ ಪರೀಕ್ಷೆಗಳೂ ಯಥಾಕ್ರಮ ನಡೆಯಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಸ್ಟಾರ್ ಹೊಟೇಲುಗಳಲ್ಲಿ ಕಾರ್ಯಕ್ರಮ ಮಾಡಬಾರದು. ಸಾರ್ವಜನಿಕ ಕಾರ್ಯಕ್ರಮ ಮಾಡಬಾರದು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿದವರ ಲೈಸನ್ಸ್ ರದ್ದಾಗಲಿದೆ. ಸರಕಾರಿ ಕಚೇರಿಗಳು ಇರುತ್ತವೆ. ವಿಧಾನಸಭೆಯ ಬಜೆಟ್ ಅಧಿವೇಶನ ಮುಂದುವರಿಯುತ್ತದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳ ರಜೆ ರದ್ದುಪಡಿಸಲಾಗಿದೆ.