ತನ್ನ ಸಿಬ್ಬಂದಿಗೂ ಮನೆಯಲ್ಲಿ ಕೂತು ಕೆಲಸಮಾಡಲು ಹೇಳಿದ ವಿಶ್ವಸಂಸ್ಥೆ

0
531

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್, ಮಾ. 14: ಕೊರೊನಾ ವೈರಸ್‍ನಿಂದಾಗಿ ನ್ಯೂಯಾರ್ಕಿನ ವಿಶ್ವಸಂಸ್ಥೆಯ ಕಚೇರಿಯ ಎಲ್ಲ ಸಿಬ್ಬಂದಿ ಮನೆಯಲ್ಲೇ ಕುಳಿತು ಅಥವಾ ಬೇರೆಡೆ ಕಂಪ್ಯೂಟರ್ ಕೆಲಸ ಮಾಡಬೇಕೆಂದು ಆದೇಶಿಸಲಾಗಿದೆ. ಎಪ್ರಿಲ್ ಹನ್ನೆರಡವರೆಗೆ ಕಚೇರಿಗೆ ಆಗಮಿಸದೆ ಕೆಲಸ ಮಾಡಬೇಕೆಂದು ಪ್ರಧಾನ ಕಾರ್ಯದರ್ಶಿ ಆಂಟಾನಿಯೊ ಗುಟರಸ್ ಸೂಚಿಸಿದ್ದಾರೆ. ಮಾರ್ಚ್ ಹದಿನಾರರ ಬಳಿಕ ತೀರ್ಮಾನ ಕಾರ್ಯಗತವಾಗುವುದು. ಸಿಬ್ಬಂದಿಗಳು ಮನೆಯಲ್ಲಿ ಇರಬೇಕು. ಅಲ್ಲಿಯೇ ಕೆಲಸ ಮಾಡಬೇಕು.

ಪಿಲಿಪ್ಪೀನ್ಸಿನ ವಿಶ್ವಸಂಸ್ಥೆ ಪ್ರತಿನಿಧಿಯಲ್ಲಿ ಕೊರೊನಾ ಇರುವುದು ಶುಕ್ರವಾರ ದೃಢಪಟ್ಟಿತ್ತು. ಯುನಿಸೆಫ್‍ನ ನ್ಯೂಯಾರ್ಕಿನ ಕೇಂದ್ರ ಕಚೇರಿಯನ್ನೂ ಬಂದ್ ಮಾಡಿಡಲು ಹೇಳಲಾಗಿದೆ. ಇಲ್ಲಿ ಮೂರು ಮಂದಿಗೆ ಕೊರೊನಾ ತಗಲಿದೆ. ನ್ಯೂಯಾರ್ಕ್ ನಗರದಲ್ಲಿ ಈವರೆಗೆ 154 ಮಂದಿಗೆ ಕೊರೊನಾ ದೃಢಪಟ್ಟಿದೆ.