ಸನ್ಮಾರ್ಗ ವಾರ್ತೆ
ಬೆಂಗಳೂರು, ಮಾ. 14: ಕೊರೊನಾ ಭೀತಿಯಿಂದ ಬೆಂಗಳೂರಿನಲ್ಲಿ ರವಿವಾರ ಆರಂಭವಾಗಬೇಕಿದ್ದ ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ಮುಂದೂಡಲಾಗಿದೆ. ಬೆಂಗಳೂರಿನಲ್ಲಿ ಐವರಿಗೆ ಕೊರೊನಾ ದೃಢಪಟ್ಟಿತ್ತು.
ಕೊರೊನಾ ಪ್ರತಿರೋಧದ ಅಂಗವಾಗಿ ರಾಜ್ಯ ಸರಕಾರ ಸಾರ್ವಜನಿಕ ಕಾರ್ಯಕ್ರಮಕ್ಕೆ ನಿಯಂತ್ರಣ ಹೇರಿದ್ದರಿಂದ ಆರೆಸ್ಸೆಸ್ ಕಾರ್ಯಕ್ರಮವನ್ನು ಮುಂದೂಡಲಾಯಿತು. ಮಾರ್ಚ್ ಹದಿನೈದರಿಂದ ಹದಿನೇಳರವರೆಗೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು. ಕೇಂದ್ರ ರಾಜ್ಯ, ಸರಕಾರದ ಸೂಚನೆಯ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ ಎಂದು ಆರೆಸ್ಸೆಸ್ ಸಹಕಾರ್ಯವಾಹಕ್ ಸುರೇಶ್ ಭಯ್ಯಾಜಿ ಜೋಷಿ ತಿಳಿಸಿದರು.












