ಬಿಜೆಪಿ ಸೇರುವ ಸಿಂಧ್ಯಾರ ತೀರ್ಮಾನ ತಪ್ಪು: ರಾಜಕುಟುಂಬದ ಸದಸ್ಯ ಪ್ರದ್ಯುತ್ ದೇಬರ್ಮ

0
1006

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 13: ಬಿಜೆಪಿ ಸೇರುವ ಜ್ಯೋತಿರಾದಿತ್ಯ ಸಿಂಧ್ಯರ ತೀರ್ಮಾನ ಸರಿಯಲ್ಲ ಎಂದು ಮಾಜಿ ತ್ರಿಪುರ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಿಂಧಿಯ ಅವರ ಸಂಬಂಧಿಕರಾದ ಮತ್ತು ಮಾಣಿಕ್ಯ ರಾಜಕುಟುಂಬದ ಮುಖ್ಯಸ್ಥರಾದ ಪ್ರದ್ಯೋತ್ ದೇಬರ್ಮ ಹೇಳಿದ್ದಾರೆ.

ಕಾಂಗ್ರೆಸ್ಸಿನಿಂದ ಬಿಜೆಪಿಗೆ ಹಾರಿದ್ದು ಸರಿಯಾದ ತೀರ್ಮಾನವಲ್ಲ. ಯುವನಾಯಕರಿಗೆ ಕಾಂಗ್ರೆಸ್ ಜಾಗ ನೀಡದಿರುವ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಏನು ಮಾಡಲು ಸಾಧ್ಯ ಎಂದು ಚಿಂತಿಸಬೇಕಾಗಿತ್ತು ಎಂದು ಅವರು ಹೇಳಿದರು. ಯುವನಾಯಕರು ಒಟ್ಟಿಗೆ ಸೇರಿ ಭಾರತದಲ್ಲಿ ಬಲವಾದ ಪ್ರತಿಪಕ್ಷವನ್ನು ಕಟ್ಟಬೇಕಾಗಿದೆ. ಸಚಿನ್ ಪೈಲಟ್, ಅಜಯ್ ಕುಮಾರ್ ರಂತಹವರಿಂದ ಇದು ಸಾಧ್ಯವಿದೆ ಎಂದು ಅವರು ಹೇಳಿದರು.

ಮಾಜಿ ಐಪಿಎಸ್ ಅಧಿಕಾರಿ ಝಾರ್ಕಂಡ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ಅಜಯ್ ಕುಮಾರ್ ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದರು. ರಾಜಸ್ತಾನದ ನಾಯಕ ಸಚಿನ್ ಪೈಲಟ್ ಕಾಂಗ್ರೆಸ್ ನೇತೃತ್ವದೊಂದಿಗೆ ಮುನಿಸಿಕೊಂಡಿದ್ದಾರೆ ಎಂದು ವರದಿಗಳಿದ್ದವು. ಈ ನಡುವೆ ಪ್ರದ್ಯೋತ್ ದೇಬರ್ಮರ ಹೇಳಿಕೆ ಬಂದಿದೆ.