ಸನ್ಮಾರ್ಗ ವಾರ್ತೆ
ತಿರುವನಂತಪುರಂ, ಮಾ.16: ವಿದೇಶದಲ್ಲಿ ಕಲಿತು ಬಂದ ವೈದ್ಯರಲ್ಲಿ ಕೊರೊನಾ ದೃಢಪಟ್ಟಿದ್ದು ಮುನ್ನೆಚ್ಚರಿಕೆ ವಹಿಸಲಾಗಿದೆ. ಆರೋಗ್ಯ ಇಲಾಖೆ ಇಲ್ಲಿನ ಮೂವತ್ತು ವೈದ್ಯರನ್ನು ನಿಗಾದಲ್ಲಿರಿಸಿಕೊಳ್ಳಲಾಗಿದೆ. ತುರ್ತಾಗಿ ಇಲ್ಲಿ ನಡೆಯಬೇಕಾಗಿದ್ದ ಎಲ್ಲ ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಲಾಗಿದೆ. ಉನ್ನತ ವ್ಯಾಸಂಗ ಮಾಡಿ ಮಾರ್ಚ್ ಒಂದಕ್ಕೆ ಸ್ಪೈನಿನಿಂದ ವೈದ್ಯರು ಮರಳಿದ್ದರು. ಇವರಲ್ಲಿ ಕೊರೊನಾ ಕಂಡು ಬಂದಿದೆ. ವೈದ್ಯರೊಂದಿಗೆ ಸಂಪರ್ಕ ಹೊಂದಿದವರೆಲ್ಲರನ್ನೂ ನಿಗಾದಲ್ಲಿರಿಸಿಕೊಳ್ಳಲಾಗಿದೆ.
ತಿರುವನಂತಪುರಂ ಜಿಲ್ಲೆಯಲ್ಲಿ 1449 ಮಂದಿ ಈಗ ನಿಗಾದಲ್ಲಿದ್ದು ಕೊರೊನಾ ದೃಢವಾದ ಇಟಲಿ ಪ್ರಜೆ ಹೋಗಿರುವ ದಾರಿಯ ರೂಟ್ ಮ್ಯಾಪ್ ಈಗಾಗಲೇ ಪ್ರಕಟಿಸಲಾಗಿದೆ.












