ನಮ್ಮನ್ನೂ ಕೊಲ್ಲಿ…: ನಿರ್ಭಯ ಆರೋಪಿಗಳ ಕುಟುಂಬ

0
643

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ.16: ತಮಗೆ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಆಗ್ರಹಿಸಿ ನಿರ್ಭಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಗಲ್ಲು ತೀರ್ಪಿಗೊಳಗಾದ ನಾಲ್ವರ ಕುಟುಂಬ ಸದಸ್ಯರು ರಾಷ್ಟ್ರಪತಿ ಕೊವಿಂದ್‍ರಿಗೆ ಪತ್ರ ಬರೆದಿದ್ದಾರೆ. ವಯಸ್ಸಾದ ತಂದೆ ತಾಯಿಗಳು, ಸಹೋದರರು, ಅಪರಾಧಿಗಳ ಮಕ್ಕಳು ದಯಾ ಮರಣಕ್ಕೆ ಅನುಮತಿ ಕೇಳಿ ಪತ್ರ ನೀಡಿದ್ದು ನಮ್ಮ ಮನವಿ ಪುರಸ್ಕರಿಸಿ ದಯಾ ಮರಣಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಭವಿಷ್ಯದಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯಗಳು ಆಗದಂತೆ ತಡೆಯಬೇಕು. ನಿರ್ಭಯಳಂತೆ ಇನ್ನಾರಿಗೂ ಆಗಬಾರದು. ಒಬ್ಬರ ಬದಲಿಗೆ ಐವರಿಗೆ ಕೋರ್ಟು ಗಲ್ಲು ಕೊಡಬೇಕಾಗಿಲ್ಲ ಎಂದು ಹಿಂದಿಯಲ್ಲಿ ಪತ್ರ ಬರೆಯಲಾಗಿದೆ.

ಕ್ಷಮಿಸಲಾಗದ ಯಾವ ಪಾಪವೂ ಇಲ್ಲ ಎಂದು ಕುಟುಂಬ ಹೇಳಿದೆ. ಪ್ರತೀಕಾರ ಅಧಿಕಾರದ ವ್ಯಾಖ್ಯಾನ ಅಲ್ಲ , ಕ್ಷಮಿಸುವುದರಲ್ಲಿಯೂ ಶಕ್ತಿ ಇದೆ ಎಂದು ಪತ್ರದಲ್ಲಿ ಹೇಳಲಾಗಿದೆ. ನಿರ್ಭಯ ಪ್ರಕರಣದಲ್ಲಿ ವಿನಯ್ ಶರ್ಮ, ಅಕ್ಷಯ್ ಸಿಂಗ್ ಠಾಕೂರ್, ಪವನ್ ಗುಪ್ತಾ, ಮುಖೇಶ್ ಸಿಂಗ್‍ ರಿಗೆ ಗಲ್ಲುಶಿಕ್ಷೆಯ ತೀರ್ಪು ನೀಡಲಾಗಿದೆ. ಮಾರ್ಚ್ 20ರಂದು ಬೆಳಗ್ಗೆ 5: 30ಕ್ಕೆ ಗಲ್ಲುಶಿಕ್ಷೆ ಜಾರಿಗೆ ಬರಲಿದೆ.