ದಿಲ್ಲಿಯಲ್ಲಿ 50 ಮಂದಿಗಿಂತ ಹೆಚ್ಚು ಒಂದೆಡೆ ಸೇರಬಾರದು- ಶಾಹಿನ್ ಬಾಗ್‍ಗೂ ಅನ್ವಯ

0
715

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 16: ಕೊರೊನಾ ತುಂಬ ಮಂದಿಗೆ ಹರಡದಿರುವಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು ಜನರು ಒಂದೆಡೆ ಐವತ್ತಕ್ಕಿಂತ ಹೆಚ್ಚು ಮಂದಿ ಸೇರಬಾರದೆಂದು ದಿಲ್ಲಿ ಮುಖ್ಯಮಂತ್ರಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ. ಈ ನಿಯಂತ್ರಣ ಶಾಹಿನ್ ಬಾಗ್ ಹೋರಾಟಕ್ಕೂ ಅನ್ವಯವಾಗಲಿದೆ. ರಾತ್ರೆ ಕ್ಲಬ್‍ಗಳು, ಜಿಮ್ಮುಗಳು ಇತ್ಯಾದಿ ಮಾರ್ಚ್ 31ರವರೆಗೆ ಮುಚ್ಚಲಾಗುವುದು. ಮದುವೆಯಂತಹ ಕಾರ್ಯಕ್ರಮಗಳನ್ನು ಮುಂದೂಡಲು ಸೂಚನೆ ನೀಡಲಾಗಿದೆ. ಐವತ್ತು ಮಂದಿಗಿಂತ ಹೆಚ್ಚು ಮಂದಿ ಒಂದೆಡೆ ಸೇರುವ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಕ್ಕೆ ನಿಷೇಧ ಹೇರಲಾಗಿದೆ. ಜನರು ಹದಿನಾಲ್ಕು ದಿನ ನಿಗಾದಲ್ಲಿ ಇರಬೇಕು. ಇದಕ್ಕಾಗಿ ಹಣ ಕೊಟ್ಟು ಮೂರು ಹೊಟೇಲಿನ ಏರ್ಪಾಟು ಮಾಡಲಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.