ಕೊರೊನಾ ಶಂಕಿಸಿ ವೈದ್ಯರನ್ನು ಬಂಧನದಲ್ಲಿರಿಸಿದ ಫ್ಲಾಟ್ ಅಸೋಸಿಯೇಶನ್ ಪದಾಧಿಕಾರಿಗಳು

0
441

ಸನ್ಮಾರ್ಗ ವಾರ್ತೆ

ಕೇರಳ, ಮಾ. 16: ಕೊರೊನಾ ಸಂದೇಹದಲ್ಲಿ ವೈದ್ಯರೊಬ್ಬರನ್ನು ಕೇರಳದ ತೃಶೂರಿನ ಪ್ಲಾಟ್‍ನಲ್ಲಿ ಕೂಡಿಹಾಕಿದ್ದು, ಇದಕ್ಕಾಗಿ ಮುಂಡುಪಾಲಂ ಪ್ಲಾಟ್ ಅಸೋಸಿಯೇಶನ್‍ನ ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವೈದ್ಯರನ್ನು ಕೂಡಿಹಾಕಿ ಹೊರಗೆ ಕೊರೊನಾ ಎಂದು ಬರೆದಿಟ್ಟು ಅಪಮಾನಿಸಲಾಗಿದೆ. ವೈದ್ಯರಿಗೆ ಕೊರೊನಾ ಇರುವುದು ದೃಢಪಟ್ಟಿರಲಿಲ್ಲ. ವೈದ್ಯರ ದೂರಿನಲ್ಲಿ ತೃಶೂರ್ ಈಸ್ಟ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.